“ಶವಕ್ಕೂ ಸಂಚಕಾರ” : ಮುಖ ನೋಡಿದಾಗಲೇ ಅವರು ಇವರಿಲ್ಲವೆಂದು ಗೊತ್ತಾಗಿದ್ದು..!
ಉಡುಪಿ: ಕೋವಿಡ್-19ನ್ನ ಯಡವಟ್ಟುಗಳು ಒಂದಲ್ಲಾ ಒಂದು ರೀತಿಯಲ್ಲಿ ಬಹಿರಂಗವಾಗುತ್ತಿವೆ. ಆಸ್ಪತ್ರೆಗಳ ಯಡವಟ್ಟುಗಳು ಬೇರೆ ಬೇರೆ ಸ್ವರೂಪವನ್ನ ಪಡೆದುಕೊಳ್ಳುತ್ತಿವೆ. ರೋಗಿಗಳ ಬಗ್ಗೆ ಇದ್ದ ಆರೋಪಗಲೀಗ ಶವ ಬದಲಾವಣೆಯಲ್ಲೂ ನಡೆಯುತ್ತಿವೆ.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಶವವನ್ನೇ ಅದಲು ಬದಲು ಮಾಡಿದ್ದಾರೆ. ಕೋಟೇಶ್ವರ ನೇರಂಬಳ್ಳಿಯ ಗಂಗಾಧರ ಆಚಾರ್ಯ ನ್ಯುಮೋನಿಯಾದಿಂದ ಮೃತನಾಗಿದ್ದು, ಆಸ್ಪತ್ರೆಯಿಂದ ಶವ ಪಡೆದು ಸಂಸ್ಕಾರ ಕ್ಕೆ ಮುಂದಾದಾಗ ಶವ ಬದಲಾಗಿರೋದು ಗೊತ್ತಾಗಿದೆ.
ಶವ ಪ್ಯಾಕ್ ಮಾಡಿ ನೀಡುವ ಸಮಯದಲ್ಲಿ ಯಡವಟ್ಟು ನಡೆದಿದ್ದು, ಕುಂದಾಪುರ ರುದ್ರ ಭೂಮಿಯಲ್ಲಿ ಕುಟುಂಬಿಕರಿಗೆ ಗೊಂದಲವುಂಟಾಗಿದೆ.
ಇನ್ನೂ ಕಾರ್ಕಳ ಮೂಲದ ಪ್ರಕಾಶ್ ಎಂಬುವವರ ಶವ ಕುಂದಾಪುರಕ್ಕೆ ಕಳಿಸಲಾಗಿದೆ. ಕಾರ್ಕಳದ ಪ್ರಕಾಶ್ ಜಾಂಡೀಸ್ ನಿಂದ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಎರಡು ಶವಗಳ ಅದಲು-ಬದಲಿನಿಂದ ಸಂಬಂಧಿಗಳು ರೊಚ್ಚಿಗೆದ್ದು ಜಿಲ್ಲಾಸ್ಪತ್ರೆ ಬಗ್ಗೆ ಆಕ್ರೋಶವ್ಯಕ್ತಪಡಿಸಿದ್ದಾರೆ.