ಮೃತದೇಹದ ಗಂಟಲು ದ್ರವ ಪಡೆದ ಜಿಲ್ಲಾಡಳಿತ: ಶವ ಹೂಳುವಾಗ ನಡೆದ ಘಟನೆ

ಹಾವೇರಿ: ಜಿಲ್ಲೆಯ ಸವಣೂರ ತಾಲೂಕಿನ ಹಿರೇಮುಗದೂರ ಗ್ರಾಮದಲ್ಲಿ 70 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ಶವವನ್ನ ಹೂಳಲು ಕುಟುಂಬಸ್ಥರು ಸಿದ್ದವಾಗಿದ್ದ ಕೊನೆಯ ಕ್ಷಣದಲ್ಲಿ ಮೃತದೇಹದಿಂದ ಗಂಟಲು ದ್ರವವನ್ನ ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ಕಲೆಕ್ಟ್ ಮಾಡಲಾಗಿದೆ.
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಲ್ಯಾಬ್ ಟೆಕ್ನಿಷಿಯನ್, ಶವ ಹೂಳುವ ಗುಂಡಿಯಲ್ಲಿ ಇಳಿದು ಗಂಟಲು ದ್ರವದ ಮಾದರಿ ಸಂಗ್ರಹಿಸಿದ ಕೊರೊನಾ ವಾರಿಯರ್. ಗಂಟಲು ದ್ರವದ ಮಾದರಿ ಸಂಗ್ರಹಿಸಲು ಹಿಂದೇಟು ಹಾಕುತ್ತಿದ್ದಾರಂತೆ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್. ಗುತ್ತಿಗೆ ಲ್ಯಾಬ್ ಟೆಕ್ನಿಷಿಯನ್ ಗಳಿಂದಲೆ ಹಗಲು ರಾತ್ರಿ ಕೇಲಸ ಮಾಡಿಸುತ್ತಿರುವ ಆರೋಗ್ಯ ಇಲಾಖೆ.