“ಡಿಗ್ರಿ” ಮುಗಿದ ತಕ್ಷಣವೇ “ಪೆನ್ನು” ಹಿಡಿದವನಿಗೆ ಜಿಲ್ಲಾ “ಪ್ರಶಸ್ತಿ”…!
1 min readಹುಬ್ಬಳ್ಳಿ: ಆತ ಪದೇ ಪದೇ ಕನಸು ಕಾಣುತ್ತಿದ್ದ. ಆ ಕನಸು ನನಸು ಮಾಡಿಕೊಳ್ಳುವವರೆಗೂ ಸುಮ್ಮನೆ ಕೂಡಲೇ ಇಲ್ಲ. ಹಾಗೇ ನಿರಂತರವಾಗಿ ಕಂಡ ಕನಸನ್ನ ನನಸು ಮಾಡಿದ ಕ್ಷೇತ್ರದಲ್ಲಿಯೇ ಇಂದು ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ಮತ್ತಷ್ಟು ಬಲವನ್ನ ಹೆಚ್ಚಿಸಿಕೊಂಡವನೇ ಹಳ್ಳಿ ಹೈದ ಹುಬ್ಬಳ್ಳಿಗೆ ಬಂದಾ..
ಹೌದು.. ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಶ್ರೀಮತಿ ಕಮಲವ್ವ ಸೋಮಶೇಖರಪ್ಪ ಬುರ್ಲಬಡ್ಡಿ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿಗೆ ವಿಜಯವಾಣಿ ಪತ್ರಿಕೆಯ ವರದಿಗಾರ ಆನಂದ ಅಂಗಡಿ ಆಯ್ಕೆಯಾಗಿದ್ದಾರೆ. “ಇವರೇ ನಿಜವಾದ ಕೊರೊನಾ ಸೇನಾನಿಗಳು” ಬರೆದ ವರದಿಗೆ ಪ್ರಶಸ್ತಿ ಲಭಿಸಿದೆ.
ಮೂಲತಃ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಆನಂದ ಅಂಗಡಿ, ಪತ್ರಿಕೋಧ್ಯಮದಲ್ಲಿ ಡಿಗ್ರಿ ಮುಗಿಯುತ್ತಿದ್ದ ಹಾಗೇ ಸಂಜೆ ದರ್ಪಣದಲ್ಲಿ ಕೆಲಸ ಆರಂಭಿಸಿದರು. ಅಲ್ಲಿ ಸಿಕ್ಕ ಪ್ರೋತ್ಸಾಹದಿಂದ ಕೆಲವೇ ದಿನಗಳಲ್ಲಿ ವಿಜಯ ಕರ್ನಾಟಕದಲ್ಲಿ ತಮ್ಮ ಛಾಪನ್ನ ಮೂಡಿಸಿದರು. ನಂತರದ ದಿನಗಳಲ್ಲಿ ಕನ್ನಡಪ್ರಭ, ಉದಯವಾಣಿಯಲ್ಲಿ ಕಾರ್ಯನಿರ್ವಹಿಸಿ, ಇದೀಗ ವಿಜಯವಾಣಿಯಲ್ಲಿ ವರದಿಗಾರರಾಗಿದ್ದಾರೆ.
ಪತ್ನಿ ರಾಜಶ್ರೀ ಧಾರವಾಡ ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತ್ರಿಷಾ ಮತ್ತು ತನುಶ್ರೀ ಎಂಬ ಎರಡು ಮುದ್ದಾದ ಹೆಣ್ಣು ಮಕ್ಕಳನ್ನ ಹೊಂದಿದ್ದಾರೆ.
ಆನಂದ ಅಂಗಡಿಯವರು ಪತ್ರಿಕಾ ರಂಗದಲ್ಲಿ ತಮ್ಮದೇ ಆದ ಗುರುತನ್ನ ಹೊಂದಿದ್ದು, ಪ್ರಶಸ್ತಿ ಸಿಕ್ಕಿರುವುದು ಇದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಹಳ್ಳಿ ಪ್ರತಿಭೆಯೊಂದು ತಾನು ಕಂಡ ಕನಸು ನನಸು ಮಾಡುತ್ತ, ಸಮಾಜದ ಓರೆ ಕೋರೆಗಳನ್ನ ತಿದ್ದುತ್ತ ನಡೆದಿರುವುದು ಅಭಿನಂದಾರ್ಹವಾಗಿದೆ.
ಒನ್ಸ್ ಅಗೇನ್ ಕಂಗ್ರಾಟ್ಸ್ ಅಮ್ಮಿನಬಾವಿ ಆನಂದವರೇ…