ಡಿಡಿಪಿಐ ಕೆಳದಿಮಠ ಮತ್ತು ಪಿಇ ಮಾಸ್ತರ್ ಬಸಾಪುರ ಜುಗಲಬಂಧಿ: ಹಿಂದಿನ ರಹಸ್ಯವೇನು ಗೊತ್ತಾ…!?
1 min readಧಾರವಾಡ: ಅಧೋಗತಿಯತ್ತ ಸಾಗುತ್ತಿರುವ ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ತೀರ್ಮಾನಗಳ ಜೊತೆಗೆ ದೈಹಿಕ ಶಿಕ್ಷಣ ಶಿಕ್ಷಕ ಬಸಾಪುರ ನಡುವೆ “ಏನೋ” ಇದೆ ಎಂಬುದಕ್ಕೆ ಹಲವು ರೀತಿಯ ಸಾಕ್ಷ್ಯಗಳು ಲಭಿಸತೊಡಗಿವೆ.
ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು ಮಾಡಿಕೊಂಡಿರುವ ಗೊಂದಲಗಳಿಂದ ವಾರದಲ್ಲಿ ಎರಡ್ಮೂರು ಸಾರಿ ಕೋರ್ಟಲ್ಲಿ ಇರಬೇಕಾಗಿದೆ. ಅದೇ ಬಸಾಪುರ ಶಾಲೆಯಲ್ಲಿ ಇಲ್ಲಾ, ಡಿಡಿಪಿಐ ಕಚೇರಿಯಲ್ಲೂ ಇಲ್ಲಾ, ಬಿಇಓ ಕಚೇರಿಯಲ್ಲೂ ಇರೋದಿಲ್ಲ ಎಂಬುದು ಡಿಡಿಪಿಐ ಅವರಿಗಷ್ಟೇ ಗೊತ್ತಿದೆಯಂತೆ.
ಕರ್ನಾಟಕವಾಯ್ಸ್.ಕಾಂ ಹಲವು ಮಾಹಿತಿಯನ್ನು ಕ್ರೋಡಿಕರಿಸುತ್ತ ನಡೆದಾಗ, ಹಲವು ಪ್ರಮಾದಗಳು ಕಂಡು ಬರತೊಡಗಿವೆ. ಕೆಲವು ದಿನಗಳ ಹಿಂದೆ ನಡೆದ ಜಿಲ್ಲಾ ಆಟೋಟಗಳು ಕಾಟಾಚಾರಕ್ಕೆ ನಡೆದವು. ಬಾಲಮಾರುತಿ ಸಂಸ್ಥೆಯಲ್ಲಿ ನಡೆದ ರಾಜ್ಯ ಮಟ್ಟದ ಜಿಮ್ನಾಸ್ಟಿಕ್, ಗೌರವವಿಲ್ಲದ ಹಾಗಾಯಿತು.
ಆಟೋಟಗಳಲ್ಲಿ ಸರಕಾರಕ್ಕೆ ಬೇರೆಯದ್ದೆ ಲೆಕ್ಕ ಕೊಡುವ ಹುನ್ನಾರ ನಡೆದಿದ್ದು, ಆ ಎರಡು ದಿನಗಳಲ್ಲಿ ಮಾಡಿದ ಖರ್ಚು ಎಷ್ಟು ಎಂಬುದನ್ನ ಬಹಿರಂಗ ಮಾಡಬೇಕಿದೆ.
ಸೆಪ್ಟೆಂಬರ್ 12 ರಂದು ಬಸಾಪುರ ಅವರನ್ನ ಮರಳಿ ಶಾಲೆಗೆ ಕಳಿಸಬೇಕೆಂಬ ಡಿಡಿಪಿಐ ಆದೇಶ ಇನ್ನೂ ಕಸದಬುಟ್ಟಿಯಲ್ಲಿದೆ. ಇಂತಹ ಸ್ಥಿತಿಯಲ್ಲಿ ಧಾರವಾಡ ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕಂತೆ…