ವಿದ್ಯಾಗಮ ಪರ ಡಿಡಿಪಿಐ ವಕಾಲತ್ತು..? ಇಲಾಖೆಗೆ ಬರೆದ ಪತ್ರದಲ್ಲೇನಿದೆ.. ? ಎಕ್ಸಕ್ಲೂಸಿವ್
1 min readಚಿಕ್ಕಬಳ್ಳಾಪುರ: ವಿದ್ಯಾಗಮ ಕಾರ್ಯಕ್ರಮದಿಂದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂಬ ವಿರೋಧದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶಕುಮಾರ, ವಿದ್ಯಾಗಮ ಯೋಜನೆಯನ್ನ ತಾತ್ಕಾಲಿಕವಾಗಿ ಕಾರ್ಯಕ್ರಮವನ್ನ ಸ್ಥಗಿತಗೊಳಿಸಲು ಆದೇಶ ನೀಡಿದ್ದಾರೆ.
ಇಡೀ ಪ್ರಕರಣದ ಎಕ್ಸಕ್ಲೂಸಿವ್ ಮಾಹಿತಿಯ ವೀಡಿಯೋ ಇಲ್ಲಿದೆ ನೋಡಿ
ಇಲಾಖೆಯ ಯಾವುದೇ ಮಾಹಿತಿಯನ್ನ ಕೇಳದೇ ಇದ್ದರೂ, ಇಲ್ಲಿನ ಡಿಡಿಪಿಐ ನಾಗೇಶ ಇಲಾಖೆಗೆ ಮಾಹಿತಿಯನ್ನ ರವಾನೆ ಮಾಡಿದ್ದಾರೆ. ಅವರ ಪ್ರಕಾರ ಯಾವುದೇ ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ತೊಂದರೆಯಾಗಿಲ್ಲ ಎಂಬುದು. ಈ ಪತ್ರವನ್ನ ಸಚಿವರ ಹೇಳಿಕೆಯ ಕೆಲವೇ ಗಂಟೆಗಳಲ್ಲಿ ಸಿದ್ಧಪಡಿಸಿ ರವಾನೆ ಮಾಡಿ, ಅದನ್ನ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡಾ ಮಾಡಲಾಗಿದೆ.
ಸರಕಾರದ ಪರವಾಗಿ ಡಿಡಿಪಿಐ ಮಾಹಿತಿ ನೀಡಿ, ಉದ್ದೇಶಪೂರ್ವಕವಾಗಿ ಗೊಂದಲವನ್ನ ಸೃಷ್ಟಿ ಮಾಡುತ್ತಿದ್ದಾರೆನ್ನುವುದೀಗ ಚರ್ಚೆಗೆ ಗ್ರಾಸವಾಗಿದೆ. ಯಾವುದೇ ಇಲಾಖೆಯಿಂದಲೂ ಮಾಹಿತಿ ಪಡೆಯದೇ ಸರಕಾರಕ್ಕೆ ಮಾಹಿತಿ ರವಾನೆ ಮಾಡಿರುವುದೇ ಅಚ್ಚರಿಗೆ ಕಾರಣವಾಗಿದೆ.
ಜಿಲ್ಲೆಯ ಯಾವೊಬ್ಬ ಶಿಕ್ಷಕರಿಗೆ ಕೊರೋನಾ ಬಂದಿಲ್ಲವೆಂದರೂ, ಮಕ್ಕಳ ಬಗ್ಗೆಯಾಗಲಿ ಪಾಲಕರ ಬಗ್ಗೆಯಾಗಲಿ ಚರ್ಚೆ ಮಾಡದೇ, ಮಾಹಿತಿಯನ್ನ ಕಳಿಸುವುದಕ್ಕೆ ಇಷ್ಟೊಂದು ಗಡಿಬಿಡಿ ಮಾಡಿರುವುದರ ಹಿಂದೆ ಬೇರೆಯದ್ದೇ ಉದ್ದೇಶವಿರಬಹುದೆಂದು ಹೇಳಲಾಗುತ್ತಿದೆ.