ಧಾರವಾಡ: ಸಚಿವ ಲಾಡ್ ಅವರೇ “ಡಿಡಿಪಿಐಯವರಿಗೆ ಸತ್ಕಾರ” ಯಾವಾಗ- ಕೆಳದಿಮಠ ಅವರ ಸಾಧನೆ ನೋಡಿದ್ರಾ…!?

ಧಾರವಾಡ: ರಾಜ್ಯದಲ್ಲಿಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಬಂದಾಗಿದೆ. ವಿದ್ಯಾಕಾಶಿ ಎಂದು ಕರೆಯಿಸಿಕೊಳ್ಳುವ ಧಾರವಾಡ ಮತ್ತೆ ಈ ಬಾರಿಯೂ ಕೆಳದಿಂದ 13ನೇ ಸಂಖ್ಯೆಯಲ್ಲಿದೆ. ಈ ಕಾರಣಕ್ಕಾಗಿಯಾದರೂ ಜಿಲ್ಲಾ ಉಸ್ತುವಾರಿ ಸಚಿವರು ಡಿಡಿಪಿಐ ಅವರಿಗೆ ಸತ್ಕರಿಸಲೇಬೇಕಿದೆ.
ಧಾರವಾಡದ ಶಾಲಾ ಶಿಕ್ಷಣ ವಿಭಾಗದ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರ ಈ ಸಾಧನೆ ಮೂಲೆ ಮೂಲೆಯಲ್ಲೂ ಮೆಚ್ಚುಗೆ ಕಾರಣವಾಗಿದೆ ಎಂದು ಗಡಿ ಭಾಗದಲ್ಲಿ ಚರ್ಚೆ ನಡೆಯುತ್ತಿದೆ.
ಕಳೆದ ಬಾರಿ 24 ನೇ ಸ್ಥಾನದಲ್ಲಿದ್ದ ಧಾರವಾಡ ಜಿಲ್ಲೆಯನ್ನ 22 ನೇ ಸ್ಥಾನಕ್ಕೆ ತಂದಿದ್ದಾರೆ. 24 ನೇ ಸ್ಥಾನ ಬಂದಾಗಲೂ ಕೆಳದಿಮಠ ಅವರೇ ಡಿಡಿಪಿಐ ಆಗಿದ್ದರು ಎಂಬುದು ಗಮನದಲ್ಲಿರಲಿ.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮಗೊಳಿಸುವಂತೆ ಆಗಾಗ, ಸಭೆಯಲ್ಲೂ ಕೆಳದಿಮಠ ಅವರಿಗೆ ಹೇಳಿದ್ದರು. ಆ ಪ್ರಯೋಜನ ಎಷ್ಟರ ಮಟ್ಟಿಗೆ ಆಗಿದೆ ಎಂಬುದು ಈಗ ಬಹಿರಂಗವಾಗಿದೆ.
ಇಂತಹ ಅಭೂತಪೂರ್ವ ಯಶಸ್ಸು ಒದಗಿಸಿ, ಧಾರವಾಡದ ಕೀರ್ತಿಯನ್ನ “22” ಸಂಖ್ಯೆಯ ಮೂಲಕ ರಾಜ್ಯದಲ್ಲಿ ಕೀರ್ತಿ ಇಮ್ಮಡಿಸಿದ ಡಿಡಿಪಿಐ ಅವರಿಗೆ ಸಚಿವ ಲಾಡ್ ಅವರು ಶೀಘ್ರವಾಗಿ ಸತ್ಕಾರ ಮಾಡುವ ಭರವಸೆಯಿದೆ.