“ಮೊದ್ಲು ನೀ ಪ್ರಮಾಣ ಮಾಡ್ಪಾ” DDPIಗೆ ‘ಮಾತಲ್ಲೇ ಗುಮ್ಮಿದ’ ಮಂತ್ರಿ ಲಾಡ್….!!!

ಧಾರವಾಡ: ಜಿಲ್ಲೆಯ ಶಿಕ್ಷಣ ವ್ಯವಸ್ಥೆಯನ್ನ ಸುಧಾರಿಸುವ ನಿಟ್ಟಿನಲ್ಲಿ ಧಾರವಾಡದ ಜೆಎಸ್‌ಎಸ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಶಾಲಾ ಶಿಕ್ಷಣ ಉಪನಿರ್ದೇಶಕರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸರಿಯಾಗಿ ವೇದಿಕೆಯಲ್ಲಿ ಟಾಂಗ್ ಕೊಟ್ಟರು.
ಸಭೆಯಲ್ಲಿದ್ದವರಿಗೆ ಪ್ರಮಾಣ ಮಾಡಲು ಡಿಡಿಪಿಐ ಎಸ್. ಎಸ್.ಕೆಳದಿಮಠ ಮುಂದಾದಾಗ, ಮೊದಲು ನೀವು ಮಾಡಿ ಎಂದಾಗ ಅನಿವಾರ್ಯವಾಗಿ ಪ್ರಾಮಾಣಿಕತೆಯಿಂದ ಇರುವುದಾಗಿ ಕೈ ಮುಂದೆ ಹಿಡಿದು ಪ್ರಮಾಣ ಮಾಡಿದ್ರು.
ವೀಡಿಯೋ…
ಸಚಿವ ಸಂತೋಷ ಲಾಡ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರಿಗೆ ಶೈಕ್ಷಣಿಕ ವ್ಯವಸ್ಥೆ ಸುಧಾರಿಸಲು ಮನವಿ ಮಾಡಿದರು.