ಬಿಪಿಎಡ್ ಶಿಕ್ಷಕರಲ್ಲಿ ಹರ್ಷ- ಡಿಡಿಪಿಐ ಹಂಚಾಟೆ ಮಾಡಿದ್ದಾದರೂ ಏನು..?
ಧಾರವಾಡ: ಜಿಲ್ಲೆಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಹಲವು ಶಿಕ್ಷಕರಿಗೆ ಗಣೇಶ ಚತುರ್ಥಿ ಶುಭವನ್ನ ನೀಡಿದ್ದು, ಅದಕ್ಕೆ ಕಾರಣವಾಗಿದ್ದು ಧಾರವಾಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು.
ಹೌದು.. ಧಾರವಾಡ ಜಿಲ್ಲೆಯ ಡಿಡಿಪಿಐ ಮೋಹನಕುಮಾರ ಹಂಚಾಟೆ, ಹಬ್ಬದ ಮುನ್ನಾದಿನವೇ ದೈಹಿಕ ಶಿಕ್ಷಣ ಶಿಕ್ಷಕರಿಗೆ ಶುಭ ಸುದ್ದಿಯನ್ನ ಕೊಟ್ಟಿದ್ದಾರೆ. ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರಾಥಮಿಕ ಶಾಲೆಯಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಿಗೆ ಪದೋನ್ನತಿ ನೀಡುವುದಕ್ಕೆ ಮುಂದಾಗಿದ್ದಾರೆ.
ಕಳೆದ ಎಂಟು ದಿನಗಳ ಹಿಂದಷ್ಟೇ ಮಾತನಾಡಿದ್ದ ಡಿಡಿಪಿಐ ಹಂಚಾಟೆ, ಆದಷ್ಟು ಬೇಗನೇ ಈ ಪ್ರಕ್ರಿಯೆ ಮುಗಿಸುವುದಾಗಿ ಹೇಳಿದ್ದರು. ಈಗ ಅದೇ ರೀತಿ ನಡೆದುಕೊಂಡಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರ ಮಾಹಿತಿಯನ್ನ ಕಲೆ ಹಾಕಿದ್ದಾರೆ.
ಇದೇ ತಿಂಗಳ 24ರ ವರೆಗೆ ಸಮಗ್ರ ಮಾಹಿತಿಯನ್ನ ಪಡೆಯಲು ಆದೇಶ ನೀಡಿರುವ ಡಿಡಿಪಿಐ ಮೋಹನಕುಮಾರ ಹಂಚಾಟೆಯವರ ಕ್ರಮವನ್ನ ಶಿಕ್ಷಕರು ಶ್ಲಾಘಿಸಿದ್ದಾರೆ.