ಡಿಡಿಪಿಐ-ಸಿಬ್ಬಂದಿ-25 ಶಿಕ್ಷಕರಿಗೆ ಕೊರೋನಾ ಪಾಸಿಟಿವ್: ಬೆಚ್ಚಿಬಿದ್ದ ಶಿಕ್ಷಕ ಸಮೂಹ
ಮೈಸೂರು: ಇದು ಶಿಕ್ಷಣ ಇಲಾಖೆಯನ್ನೇ ನಡುಗಿಸುವ ಮಾಹಿತಿ. ಕೊರೋನಾ ಹಾವಳಿ ಎಷ್ಟರಮಟ್ಟಿಗೆ ಹೆಚ್ಚಾಗಿದೆ ಎನ್ನುವುದಕ್ಕೆ ಈ ಮಾಹಿತಿಯನ್ನ ನೋಡಿದರೇ ನಿಮಗೂ ಅನಿಸದೇ ಇರದು. ಇಷ್ಟೊಂದು ಪ್ರಮಾಣದಲ್ಲಿ ಕಂಡು ಬಂದಿರುವುದು ರಾಜ್ಯದಲ್ಲೇ ಮೊದಲು..
ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ನಾಲ್ಕು ಸಿಬ್ಬಂದಿಗಳಿಗೂ ಕೊರೋನಾ ಪಾಸಿಟಿವ್ ಬಂದಿರುವುದು ಕನ್ ಫರ್ಮ ಆಗಿದೆ.
ಮೈಸೂರು ಸೇರಿ ಗ್ರಾಮೀಣ ಪ್ರದೇಶದಲ್ಲಿ 500 ಶಿಕ್ಷಕರನ್ನ ತಪಾಸಣೆ ಮಾಡಿದಾಗ 25 ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಶಿಕ್ಷಕ ಸಮೂಹ ತೀವ್ರ ಆತಂಕದಲ್ಲಿ ಮುಳುಗಿದೆ ಎಂದು ಮೈಸೂರು ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎ.ಸೋಮೇಗೌಡ ಮಾಹಿತಿ ನೀಡಿದ್ದಾರೆ.
ಡಿಡಿಪಿಐ ಪಾಂಡುರಂಗ ಹಾಗೂ ಕಚೇರಿಯ ನಾಲ್ಕು ಗುಮಾಸ್ತರಿಗೆ ಕೊರೋನಾ ದೃಢವಾಗಿದೆ. ಹುಣಸೂರು ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯಲ್ಲಿ ನಲಿ-ಕಲಿ ತರಬೇತಿಯಲ್ಲಿದ್ದ ಇಬ್ಬರು ಶಿಕ್ಷಕರಿಗೂ ಪಾಸಿಟಿವ್ ಬಂದಿದೆ.
ಡಿಡಿಪಿಐ ಕಛೇರಿಯಲ್ಲಿ ಜಾಗದ ಸಮಸ್ಯೆಯಿರುವುದು ಕೂಡಾ, ಕೊರೋನಾ ಹರಡುವುದಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಕೊವೀಡ್-19 ಹರಡುವಿಕೆಯ ಮಾಹಿತಿಯಿಂದ ಶಿಕ್ಷಕ ವಲಯ ತಬ್ಬಿಬ್ಬಾಗಿದ್ದು, ಮುಂದಿನ ದಿನಗಳ ಬಗ್ಗೆ ಯೋಚಿಸಿ ಚಿಂತೆಗೀಡಾಗಿದ್ದಾರೆ.