ಹುಬ್ಬಳ್ಳಿ ಗಾಂಜಾ ಕೇಸ್-ಸಸ್ಪೆಂಡ್ ಆದ್ರೂ, ಮುಂದೇನು..? ಡಿಸಿಪಿ ಕೆ.ರಾಮರಾಜನ್ ಮಾತಾಡಿದ್ದಾರೆ….!
1 min readಹುಬ್ಬಳ್ಳಿ: ನವನಗರದ ಎಪಿಎಂಸಿ ಪೊಲೀಸ್ ಠಾಣೆಯಲ್ಲಿನ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯ ಇನ್ಸಪೆಕ್ಟರ್ ವಿಶ್ವನಾಥ ಚೌಗಲೆ ಸೇರಿದಂತೆ ಏಳು ಪೊಲೀಸರನ್ನ ಅಮಾನತ್ತು ಮಾಡಿದ್ದು, ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ, ತನಿಖೆಯಲ್ಲಿ ಇನ್ನೂ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ.
ವಶಕ್ಕೆ ಪಡೆದಿದ್ದ ಗಾಂಜಾ ಎಲ್ಲಿ ಹೋಯಿತು. ಅದನ್ನ ಎಲ್ಲಿಗೆ ಮಾರಾಟ ಮಾಡಲಾಗಿದೆ ಎಂಬುದರ ಬಗ್ಗೆಯೂ ವಿಚಾರಣೆ ನಡೆಯಲಿದೆ. ಘಟನೆಗೆ ಸಂಬಂಧಿಸಿದಂತೆ ಡಿಸಿಪಿ ಕೆ.ರಾಮರಾಜನ್ ಅವರ ಹೇಳಿಕೆ ಇಲ್ಲಿದೆ ನೋಡಿ..
ತನಿಖೆಗೆ ತೊಂದರೆಯಾಗದ ರೀತಿಯಲ್ಲಿ ಅಮಾನತ್ತು ಮಾಡಲಾಗಿದ್ದು, ಹಿರಿಯ ಅಧಿಕಾರಿಗಳು ಇನ್ನಷ್ಟು ಜಾಗೃತೆಯಿಂದ ತಮ್ಮ ಕರ್ತವ್ಯವನ್ನ ನಿರ್ವಹಣೆ ಮಾಡಲಿದ್ದಾರೆ.