ಮಾಡಬೇಕಾದವರನ್ನ ಸಸ್ಪೆಂಡ್ ಮಾಡಿಲ್ಲ, ಡಿಸಿಪಿ ಅಮಾನತ್ತಿನ ವಿರುದ್ಧ ಹೆಚ್ಚಿದ ಆಕ್ರೋಶ…!!!
1 min readಯಾವತ್ತೂ ಗೊಂದಲ ಸೃಷ್ಟಿಸದ ಅಧಿಕಾರಿ
ಸಿಬ್ಬಂದಿಯೊಂದಿಗೂ ಉತ್ತಮ ಬಾಂಧವ್ಯ
ಕೋಲಾರ: ಹುಬ್ಬಳ್ಳಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣದಲ್ಲಿ ಡಿಸಿಪಿ ಪಿ.ರಾಜೀವ್ ಅಮಾನತ್ತಿನ ಸರ್ಕಾರ ನಡೆಯ ವಿರುದ್ಧ ಹಿರಿಯ ಸಾಹಿತಿ ಹಾಗೂ ದಲಿತ ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ ತಿರುಗಿಬಿದ್ದಿದ್ದಾರೆ.
ಕಾಂಗ್ರೆಸ್ ಸರ್ಕಾರ ದಲಿತರ ದಮನ ಮಾಡಲು ಮುಂದಾಗಿದೆ. ಮಠಾಧೀಶರ ಒತ್ತಡಕ್ಕೆ ಮಣಿದು ದಲಿತ ಅಧಿಕಾರಿ ಡಿಸಿಪಿ ಪಿ.ರಾಜೀವ್ ಅವರನ್ನ ಅಮಾನತು ಮಾಡಲಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆ, ಕೋಲಾರದ ನಚಿಕೇತನ ನಿಲಯದ ಬಳಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ,
ರಾಜೀವ್ ಅಮಾನತು ಕುರಿತು ರಾಜ್ಯಾಧಂತ ದಲಿತ ಪ್ರಜ್ಞಾವಂತರಿಂದ ಜಾಗೃತಿಗೊಳಿಸುವ ಕಾರ್ಯ ನಡೆಸಲಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಲಿತರ ದಮನಕಾರಿ ಘಟನೆಗಳು ನಡೆಯುತ್ತಿವೆ ಎಂದು ದೂರಿದರು.
ದಲಿತ ಪೊಲೀಸ್ ಅಧಿಕಾರಿಯನ್ನು ಅಮಾನತ್ತುಗೊಳಿಸಿರುವ ಕುರಿತು ಗೃಹ ಸಚಿವ ಜಿ.ಪರಮೇಶ್ವರ್ ಸೃಷ್ಟಿಕರಣ ನೀಡಬೇಕು. ಪರಮೇಶ್ವರ್, ಮಹದೇವಪ್ಪ ಅವರು ದಲಿತರನ್ನು ಪ್ರತಿನಿಧಿಸಿಲ್ಲ, ದಲಿತರಿಗೆ ದೊಡ್ಡ ದ್ರೋಹ ಮಾಡುತ್ತಿದ್ದಾರೆಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಎಸ್ಸಿ-ಎಸ್ಟಿ 11 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವ ಮೂಲಕ ದಲಿತ ಮಕ್ಕಳ ಶಿಕ್ಷಣವನ್ನು ಕಸಿದುಕೊಂಡಿದೆ ಎಂದು ಹೇಳಿದರು.
ಸಾಮಾಜಿಕ ನ್ಯಾಯ ಹೇಳುವ ಕಾಂಗ್ರೆಸ್ ಸರ್ಕಾರ ಬಲಿತ ಸಮುದಾಯ ನಾಯಕರಿಗೆ ಮಣಿದು ದಲಿತ ಅಧಿಕಾರಿಗಳನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅಹಿಂದ ಹೆಸರಲ್ಲಿ ಮೋಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕೋಟಿಗಾನಹಳ್ಳಿ ರಾಮಯ್ಯ,
ಕೋಲಾರದಲ್ಲಿ ಕೋಟಿಗಾನಹಳ್ಳಿ ರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ,