ಪೊಲೀಸ್‌ನ ಆರೋಗ್ಯಕ್ಕಾಗಿ “ಲಕ್ಷ” ರೂಪಾಯಿ ನೀಡಿದ ಡಿಸಿಪಿ ರವೀಶ ಸಿಆರ್…!

ಹುಬ್ಬಳ್ಳಿ: ಅಪಘಾತದಲ್ಲಿ ತನ್ನ ಮಡದಿ ಮಕ್ಕಳನ್ನ ಕಳೆದುಕೊಂಡು ಮಾರಕ ರೋಗದಿಂದ ಬಳಲುತ್ತಿದ್ದ ಪೊಲೀಸ್‌ರೋರ್ವರಿಗೆ ಹುಬ್ಬಳ್ಳಿ ಧಾರವಾಡ ಕಮೀಷನರೇಟ್ ವ್ಯಾಪ್ತಿಯ ಡಿಸಿಪಿ ರವೀಶ ಸಿ.ಆರ್ ಅವರು ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅವಳಿನಗರದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ರವೀಶ್ ಅವರು, ಪೇದೆಗೆ ಒಂದು ಲಕ್ಷ ರೂಪಾಯಿಗಳನ್ನ ನೀಡಿದ್ದು, ಅವರನ್ನ ಇಲಾಖೆ ಸ್ಮರಿಸುವಂತಾಗಿದೆ.
ನೊಂದ ಪೇದೆಯ ಮನವಿ ಹೀಗಿತ್ತು…
ನನ್ನ ಎಲ್ಲಾ ಆತ್ಮೀಯ ಚಿಕ್ಕಮಗಳೂರು ಪೊಲೀಸ್ ಘಟಕದ ಹಿರಿಯ/ಕಿರಿಯ ಸಹೋದ್ಯೋಗಿ ಸಿಬ್ಬಂದಿಗಳಿಗೆ/ಮಿತ್ರರಿಗೆ ನಮಸ್ಕರಿಸುತ್ತಾ ಈ ಮೂಲಕ ತಮ್ಮಲ್ಲಿ ತಿಳಿಯ ಪಡಿಸುವುದೆನೆಂದರೆ….
ನಾನು 2015 ಸಾಲಿನ ಚಿಕ್ಕಮಗಳೂರು ನಾಗರೀಕ ಪೊಲೀಸ್ ಪೇದೆಯಾಗಿ ಆಯ್ಕೆ ಆಗಿದ್ದು, ಪ್ರಸ್ತುತ ಸಖರಾಯ ಪಟ್ಟಣ ಪೊಲೀಸ್ ತಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತೇನೆ ತಮಗೆಲ್ಲ ತಿಳಿಯಪಡಿಸುವುದೇನೆಂದರೆ ನಾನು ಕಡೂರು ತಾಲೂಕಿನ ಎಸ್. ಬಿದರೆ ಗ್ರಾಮದ ಬಡ ಕುಟುಂಬದಿಂದ ಹಲವಾರು ಕನಸುಗಳನ್ನು ಹೊತ್ತು ಪೊಲೀಸ್ ಇಲಾಖೆಗೆ ಸೇರ್ಪಡೆಯಾದೇನು ನಂತರ ನಾನು ನನ್ನ ಹೆಂಡತಿ ಮಗನೊಂದಿಗೆ ಸುಖ ಸಂಸಾರದೊಂದಿಗೆ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಮೊದಲು ಕರ್ತ್ಯವ ನಿರ್ವಹಿಸುತ್ತ ಇರುವಾಗ ಅನ್ಯೂನ್ಯವಾಗಿ ಸಂಸಾರ ಮಾಡಿಕೊಂಡು ಹೆಂಡತಿ ಮಗನೊಂದಿಗೆ ಸಂತೋಷ ವಾಗಿದ್ದ ಸಮಯದಲ್ಲಿ ನನ್ನ ಜೀವನದ ಅವಿಭಾಜ್ಯ ಅಂಗವಾಗಿದ್ದ ಪ್ರೀತಿಸಿ ಮದುವೆಯಾದ ನನ್ನ ಮಡದಿ ಲತಾಪ್ರತಾಪ್ , ನನ್ನ 02 ವರ್ಷದ ಮಗ ಅನ್ವಿತ್ ಹಾಗೂ ನನ್ನ ತಮ್ಮನೊಂದಿಗೆ ಬೈಕಿನಲ್ಲಿ ನಮ್ಮ ಸ್ವ ಗ್ರಾಮದಿಂದ ಚಿಕ್ಕಮಗಳೂರು ಮಾರ್ಗವಾಗಿ ಬರುತ್ತಿದ್ದಾಗ ರಸ್ತೆ ಅಘಾತವೊಂದರಲ್ಲಿ ದಿನಾಂಕ 24.06.2019 ರಂದು ಲಕ್ಯಾ ಕ್ರಾಸ್ ಬಳಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬಂದಂತಹ ವಾಟರ್ ಟ್ಯಾಂಕರ್ ಲಾರಿಯು ನನ್ನ ಪ್ರೀತಿಯ ಧರ್ಮ ಪತ್ನಿ ಲತಾಳನ್ನು ಹಾಗೂ ನನ್ನ ಮುದ್ದಿನ ತಮ್ಮ ಮನೋಜನ ಮೇಲೆ ಮಾರಣಾಂತಿಕ ಅಪಘಾತ ಮಾಡಿ ನನ್ನ ಹೆಂಡತಿ ಮತ್ತು ತಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಇದೀಗ ನನ್ನ ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದು, ಇದಕ್ಕಾಗಿ ಸಹಾಯ ಬಯಸುತ್ತೇನೆ.