ಸರ್ ತಪ್ಪಾತ್ರೀ.. ಕೈ ಮುಗಿತೇವಿ ಬಿಡ್ರೀ… ಇನ್ನೊಮ್ಮೆ ಮಾಡೂದಿಲ್ರೀ ಸರ್…!
1 min readಹುಬ್ಬಳ್ಳಿ: ಸಾರ್ವಜನಿಕರ ಕಾಳಜಿಗಾಗಿ ಪೊಲೀಸರು ನಿರಂತರವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರೂ, ಕೆಲವರು ಮಾತ್ರ ‘ನಾವೂ ಇರೋದೆ, ನಿಯಮ ಮುರಿಯೋಕೆ’ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇಂತಹ ಘಟನೆ ನಡೆಯುತ್ತಿದ್ದ ಸಮಯದಲ್ಲೇ ಡಿಸಿಪಿಯವರು ನೋಡಿದ್ದರಿಂದ, ಇಬ್ಬರು ಬೈಕ್ ಸವಾರರು ಇಂಗು ತಿಂದ ಮಂಗನಂತಾಗಿದ್ದರು.
ಇಲ್ಲಿದ ನೋಡಿ ವೀಡಿಯೋ..
ಹುಬ್ಬಳ್ಳಿಯ ಸುಜಾತಾ ಥೇಟರ್ ಬಳಿಯಲ್ಲಿ ವಿನಾಕಾರಣ ಸಂಚರಿಸುವ ಬೈಕ್ ಸವಾರರಿಗೆ ಕಡಿವಾಣ ಹಾಕಲು, ಹೆಚ್ಚುವರಿ ಬ್ಯಾರಿಕೇಡ್ ಗಳನ್ನ ಹಾಕಲಾಗಿತ್ತು. ಆದರೆ, ಅವುಗಳನ್ನ ಸರಿಸಿ ಹೋಗುತ್ತಿದ್ದಾಗಲೇ, ಡಿಸಿಪಿ ಆರ್.ಬಿ.ಬಸರಗಿ ಅವರ ಕೈಯಲ್ಲಿ ಸಿಕ್ಕು ಬಿದ್ದರು.
ಅಧಿಕಾರಿಯನ್ನ ನೋಡಿದ ತಕ್ಷಣವೇ ಬೈಕ್ ಸವಾರರು ಕೈ ಕೈ ಮುಗಿದು, ಇನ್ನೋಮ್ಮೆ ಹೀಗೆ ಮಾಡೋದಿಲ್ಲವೆಂದು ಹೇಳಿಕೊಂಡರು. ವಯಸ್ಸಾದವರೇ ಹೀಗೆ ಮಾಡಿದ್ರೇ ಹೇಗೆ. ಇದನ್ನೇಲ್ಲಾ ಮಾಡುತ್ತಿರುವುದು ಎಲ್ಲರ ಆರೋಗ್ಯಕ್ಕಾಗಿ ಎಂದು ತಿಳುವಳಿಕೆಯ ಎಚ್ಚರಿಕೆ ನೀಡಿ ಕಳುಹಿಸಿದರು.