ಡಿಸಿಪಿ v/s ಸಿಓಪಿ: ಪತ್ರದಲ್ಲಿ ಏನೇನು ಬರೆದಿದ್ದಾರೆ ಗೊತ್ತಾ- ಆರ್.ದಿಲೀಪ್ ಭೇಟಿ ವಿವಾದ
 
        ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಕಮೀಷನರೇಟ್ ಕಚೇರಿಯಲ್ಲಿನ ವಿವಾದವೊಂದು ಹೊರಗಡೆ ಬಿದ್ದಿದ್ದು, ಪೊಲೀಸ್ ಆಯುಕ್ತ ಆರ್.ದಿಲೀಪ್ ಡಿಸಿಪಿ ಕೃಷ್ಣಕಾಂತರಿಗೆ ಭೇಟಿಯಾಗಲು ಅವಕಾಶವನ್ನೇ ಕೊಡುತ್ತಿಲ್ಲವೆಂದು ಸ್ವತಃ ಡಿಸಿಪಿ ಪೊಲೀಸ್ ಕಮೀಷನರಿಗೆ ಪತ್ರ ಬರೆದಿದ್ದು, ಅದರ ಪ್ರತಿಯನ್ನ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೂ ಕಳಿಸಿದ್ದಾರೆ.
ಸೂಕ್ಷ್ಮ ಪ್ರಕರಣದ ತನಿಖೆಯ ಉಸ್ತುವಾರಿ ವಿಷಯವಾಗಿ ತಿಳಿಸಲು ಮತ್ತು ಹೆಚ್ಚಿನ ಮಾಹಿತಿಯನ್ನ ಪಡೆಯಲು ಪೊಲೀಸ್ ಆಯುಕ್ತರಿಗೆ ಭೇಟಿಯಾಗಲು ಹೋದರೇ, ಅವರಿಂದ ದೂರವುಳಿಯುವ ಬಗ್ಗೆ ಕೃಷ್ಣಕಾಂತ ಪತ್ರದಲ್ಲಿ ನಮೂದು ಮಾಡಿದ್ದಾರೆ.
ಈ ಬಗ್ಗೆ ವಿವರವಾಗಿ ಪತ್ರ ಬರೆದಿರುವ ಡಿಸಿಪಿ ಕೃಷ್ಣಕಾಂತ, ಪೋನ್ ಮಾಡಿದ್ರೇ ಕಟ್ ಮಾಡುವುದನ್ನ, ಸ್ವೀಕರಿಸದೇ ಇರುವುದನ್ನ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಇದರಿಂದ ಕರ್ತವ್ಯ ನಿರ್ವಹಣೆಗೆ ಅಡಚಣೆಯಾಗುತ್ತಿದೆ ಎಂಬುದನ್ನೂ ತಿಳಿಸಿದ್ದಾರೆ.
ಎಲ್ಲ ರೀತಿಯ ಪ್ರಯತ್ನಗಳು ಮುಗಿದ ಮೇಲೆ ಕಂಟ್ರೋಲ್ ರೂಮ್ ಮುಖಾಂತರ ಪತ್ರವನ್ನ ಪೊಲೀಸ್ ಆಯುಕ್ತರಿಗೆ ಡಿಸಿಪಿ ಕೃಷ್ಣಕಾಂತ ಬರೆದಿದ್ದು, ಮುಕ್ತವಾಗಿ ಭೇಟಿಯಾಗಲು ಅವಕಾಶ ನೀಡಬೇಕೆಂದು ಕೂಡಾ ಕೋರಿದ್ದಾರೆ.
 
                       
                       
                       
                       
                      
 
                        
 
                 
                 
                