ಹುಬ್ಬಳ್ಳಿ-ಧಾರವಾಡ ಪಾಲಿಕೆ ವ್ಯಾಪ್ತಿ “28” ರ ಬದಲಾಗಿ “29”ಕ್ಕೆ: ಜಿಲ್ಲಾಧಿಕಾರಿ ಆದೇಶ…

ಹುಬ್ಬಳ್ಳಿ ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಸೆ.29ಕ್ಕೆ ಈದ್- ಮಿಲಾದ್ ಹಬ್ಬ ಆಚರಣೆ; ಸರ್ಕಾರಿ ರಜೆಯನ್ನು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೆ. 29 ಕ್ಕೆ ಮುಂದೂಡಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ
ಧಾರವಾಡ: ಹುಬ್ಬಳ್ಳಿ ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ
ಈದ್ ಮಿಲಾದ್ ಹಬ್ಬವನ್ನು ಸೆ.29 ಕ್ಕೆ ಆಚರಿಸುತ್ತಿರುವದರಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಸೆ.28 ರಂದು ಇರುವ ಸರ್ಕಾರಿ ರಜೆಯನ್ನು ಸೆ.29ಕ್ಕೆ ಮುಂದೂಡಿ ರಜೆ ಘೋಷಿಸಿ, ಜಿಲ್ಲಾದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಇಂದು ಸಂಜೆ ಆದೇಶ ಹೊರಡಿಸಿದ್ದಾರೆ.