ಡಿಸಿಎಂ ಲಕ್ಷ್ಮಣ ಸವದಿ ಮಗನ “ಎಂಜಿ ಗೋಸ್ಲ್ಟರ್” ಕಾರು ಡಿಕ್ಕಿ: ಬೈಕ್ ಸವಾರ ದುರ್ಮರಣ…!
1 min readಬಾಗಲಕೋಟೆ: ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಲಾಯಿಸುತ್ತಿದ್ದ “ಎಂಜಿ ಗೋಸ್ಲ್ಟರ್” ಕಾರು ಬೈಕಿಗೆ ಡಿಕ್ಕಿ ಹೊಡೆದ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದ ಕ್ರಾಸ್ ಬಳಿಯಲ್ಲಿ ನಡೆದಿದ್ದು, ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಸಾವಿಗೀಡಾಗಿದ್ದಾನೆ.
ಡಿಸಿಎಮ್ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿಯಿದ್ದ ಕಾರಿನಿಂದ ಬೈಕ್ ಸವಾರ ಕೂಡಲೆಪ್ಪ ಬೋಳಿ ಸಾವಿಗೀಡಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಕೂಡಲೆಪ್ಪ, ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕೆಎ-22- ಎಮ್ ಸಿ 5151 ನಂಬರಿನ ಕಾರು ಡಿಕ್ಕಿಯಾಗಿದ್ದು, ಮೃತ ಕೂಡಲೆಪ್ಪ ಬಾಗಲಕೋಟೆ ತಾಲೂಕಿನ ಚಿಕ್ಕಹಂಡರಗಲ್ ಗ್ರಾಮದ ನಿವಾಸಿಯಾಗಿದ್ದಾರೆ. ಹೊಲಕ್ಕೆ ಹೋಗಿ ವಾಪಸ್ ಮನೆಗೆ ಬರುವಾಗ ಘಟನೆ ನಡೆದಿದೆ.
ತಮ್ಮ ವಾಹನದ ನಂಬರ್ ಜಖಂಗೊಳಿಸಿ ದಾಖಲಾತಿ ಸಮೇತ ಇನ್ನೊಂದು ವಾಹನದಲ್ಲಿ ಹೊರಡಲು ಮುಂದಾದ ಸವದಿ ಮಗ. ವಾಹನ ಯಾರದ್ದು ಎಂದು ತಿಳಿಯದಂತೆ ನೋಡಿಕೊಳ್ಳಲು ಪ್ರಯತ್ನ. ಚಿದಾನಂದ ಸವದಿಯನ್ನು ಕೆಲ ಹೊತ್ತು ಹಿಡಿದು ಕೂರಿಸಿದ್ದ ಸ್ಥಳೀಯರು. ಚಿದಾನಂದ ಸವದಿ ಬಿಡಿಸಿ ಕಳಿಸಿದ ಹುನಗುಂದ ಪೊಲೀಸರು. ಹುನಗುಂದ ಠಾಣೆಯಲ್ಲಿ ದೂರು ದಾಖಲು.
ಚಿದಾನಂದ ಬಿಟ್ಟು ಚಾಲಕ ಹನುಮಂತ ಸಿಂಗ್ ಎಂಬುವರ ಹೆಸರಲ್ಲಿ ದೂರು. ಸ್ಥಳೀಯರಿಗೆ ನಾನು ಡಿಸಿಎಂ ಲಕ್ಷಣ ಸವದಿ ಮಗ ಹುಷಾರ್ ಎಂದು ಮೃತನ ಆಪ್ತರು ಸಂಬಂಧಿಕರಿಗೆ ಧಮಕಿ ಹಾಕಿದ ಎಂದು ಮೃತನ ಸಂಬಂಧಿಕರ ಆರೋಪ. ಚಿದಾನಂದನೆ ಕಾರು ಚಲಾಯಿಸುತ್ತಿದ್ದ ಎಂದು ಹೇಳಿದ ಮೃತನ ಸಂಬಂಧಿಕರು.
ಚಿದಾನಂದ ಸವದಿ ಹಾಗೂ 12 ಜನ ಎರಡು ಕಾರಿನಲ್ಲಿ ಪ್ರವಾಸಕ್ಕೆ ಹೋಗಿದ್ದರು. ಹಂಪಿ ,ಹೊಸಪೇಟೆ, ಕೊಪ್ಪಳ, ಅಂಜನಾದ್ರಿ ಬೆಟ್ಟ ಸೇರಿದಂತೆ ರಾಜ್ಯದ ವಿವಿಧ ಕಡೆ ಪ್ರವಾಸ ಹೋಗಿ ವಾಪಸ್ ಬರುವ ವೇಳೆ ಘಟನೆ ನಡೆದಿದೆ.