ಕೇಸ್ ಹಿಂದೆ ಪಡೆದಿದ್ದಕ್ಕೆ ಉಪಮುಖ್ಯಮಂತ್ರಿಗೆ ಸನ್ಮಾನ: ಕೊರೋನಾದಲ್ಲೂ ಗಿಫ್ಟ್ ನೀಡಿದ ಡಿಸಿಎಂ
1 min readಬಾಗಲಕೋಟೆ: ಮುಧೋಳ ನಗರದಲ್ಲಿ ಸೆಪ್ಟೆಂಬರ್ 23, 2015 ರಂದು ನಡೆದ ಗಣೇಶ ಉತ್ಸವದಲ್ಲಿ ಸಂಭವಿಸಿದ್ದ ಘಟನೆಯಲ್ಲಿ 110 ಜನರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಗಳನ್ನು ಹಿಂಪಡೆದಿದ್ದಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರನ್ನ ಮುಧೋಳನ ಜನತಾ ರಾಜಾ ಗಜಾನನ ಉತ್ಸವ ಸಮಿತಿ ಹಾಗೂ ಹಿಂದೂಪರ ಸಂಘ ಸಂಸ್ಥೆಗಳಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿಸಿಎಂ, ಅದೊಂದು ದುರ್ಘಟನೆಯಾಗಿದ್ದು, ಸಮಾಜದಲ್ಲಿ ಸಾಮರಸ್ಯದಿಂದರಬೇಕು. ಅಂದಿನ ಘಟನೆಯಲ್ಲಿ ಕಠಿಣ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣದಲ್ಲಿ 110 ಹಿಂದೂ- ಮುಸ್ಲಿಂ ಜನರ ಮೇಲೆ ದಾಖಲಾಗಿದ್ದ ಎಲ್ಲಾ ಮೊಕದ್ದಮೆಗಳನ್ನು ನಿರಂತರ ಪರಿಶ್ರಮದಿಂದ ಕಳೆದ ಸಚಿವ ಸಂಪುಟ ಸಭೆಯಲ್ಲಿ ಹಿಂಪಡೆಯಲಾಗಿದೆ. ಎಲ್ಲರ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದ್ದು, ಎಲ್ಲರ ಬೆಂಬಲ ಸದಾ ಇರಬೇಕು ಎಂದು ತಿಳಿಸಿದರು.
ಸಂದರ್ಭದಲ್ಲಿ ಗುರುರಾಜ್ ಕಟ್ಟಿ, ಬಂಡೂ ಘಾಟಿಗೆ, ಆರ್.ಟಿ.ಪಟೀಲ್, ಪ್ರಕಾಶ್ ವಸ್ತ್ರದ, ಶ್ರೀಶೈಲಗೌಡ ಪಾಟೀಲ್, ಕುಮಾರ್ ಹುಲಕುಂದ್, ಶಿವಾನಂದ ಬಡಿಗೇರ್ ಸೇರಿದಂತೆ ಸಂಘಟನೆಗಳ ಮುಖಂಡರು ಮತ್ತು ಸ್ಥಳೀಯರು ಭಾಗವಹಿಸಿದ್ದರು.