Posts Slider

Karnataka Voice

Latest Kannada News

ಡಿಸಿಎಂ ನಿನ್ನೆಯಿಂದಲೂ ಬಿಜಿ ಈಗಷ್ಟೇ ಪಾಸಿಟಿವ್ ದೃಢ- ಮುಂದೇನು..?

1 min read
Spread the love

ಬೆಂಗಳೂರು: ವಿಧಾನಸಭೆಯ ಅಧಿವೇಶನ ನಿನ್ನೆಯಿಂದ ಆರಂಭವಾಗಿದ್ದು, ವಿಧಾನಸಭೆಯ ಅಧಿವೇಶನದಲ್ಲಿ ಭಾಗಿಯಾಗಿ ಇಂದೂ ಕೂಡಾ ಕಾಣಿಸಿಕೊಂಡಿದ್ದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆಯಂತೆ.

ಈ ಬಗ್ಗೆ ಸ್ವತಃ ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿರುವ ಗೋವಿಂದ ಕಾರಜೋಳರು, ತಮ್ಮೇಲ್ಲರ ಹಾರೈಕೆಯಿಂದ ಶೀಘ್ರವಾಗಿ ಗುಣಮುಖವಾಗಿ ಎಂದಿನಂತೆ ಕಾರ್ಯಪ್ರವೃತ್ತನಾಗುತ್ತೇನೆ ಎಂದು ಹೇಳಿದ್ದಾರೆ.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರು, ನಿನ್ನೆಯಿಂದಲೂ ಅಧಿಕಾರಿಗಳ ಸಭೆಯನ್ನ ಮಾಡುವ ಜೊತೆಗೆ ನಿನ್ನೆ ರಾತ್ರಿ ಕೂಡಾ ಕುಮಾರಕೃಪ ಅತಿಥಿಗೃಹದಲ್ಲಿ ಕೊವೀಡ್-19ನಿಂದ ಮೃತರಾದ ಪ್ರಾಂಶುಪಾಲರ ಕುಟುಂಬಕ್ಕೆ ಪರಿಹಾರದ ಚೆಕ್ ನ್ನ ವಿತರಣೆ ಮಾಡಿದ್ದಾರೆ.

ಇದೀಗ ನಿನ್ನೆಯಿಂದ ಗೋವಿಂದ ಕಾರಜೋಳರ ಜೊತೆ ಸಂಪರ್ಕಕ್ಕೆ ಬಂದವರೆಲ್ಲರೂ ಕಡ್ಡಾಯವಾಗಿ ಮನೆಯಲ್ಲಿಯೇ ವಿಶ್ರಾಂತಿ ಪಡೆಯುವ ಸ್ಥಿತಿ ಬಂದೊದಗಿದ್ದು, ಅವರೆಲ್ಲರೂ ಕೂಡಾ ಟೆಸ್ಟ್ ಮಾಡಿಸಿಕೊಳ್ಳಬೇಕಿದೆ.


Spread the love

Leave a Reply

Your email address will not be published. Required fields are marked *

You may have missed