ಓರ್ವ ಡಿಸಿಎಂ ಸೇರಿ ಮೂವರು ಮಂತ್ರಿಗಳು ಕ್ವಾರಂಟೈನ್: ಗೃಹ ಮಂತ್ರಿಯೂ ಮನೆಯಲ್ಲೇ

ಬೆಂಗಳೂರು: ಕೊರೋನಾ ವೈರಸ್ ಪಾಸಿಟಿವ್ ಪ್ರಕರಣದ ರೋಗಿಯ ಟ್ರಾವೆಲ್ ಹಿಸ್ಟರಿಯಲ್ಲಿ ಮಂತ್ರಿಗಳ ಸಂಪರ್ಕ ಇರುವ ಬಗ್ಗೆ ಅನುಮಾನವಿದ್ದು, ಅದೇ ಕಾರಣಕ್ಕೆ ಡಿಸಿಎಂ ಅಶ್ವತ್ಥ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಆರ್.ಸುಧಾಕರ ಸೆಲ್ಪ್ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ರಾಜ್ಯದಲ್ಲಿ ವೈರಸ್ ಹರಡುವಿಕೆ ಪ್ರಮಾಣ ಕಡಿಮೆ ಆಗುತ್ತಿರುವ ಬೆನ್ನಲ್ಲೆ ಮಂತ್ರಿಗಳ ಜೊತೆಗಿನ ಸಂಪರ್ಕದ ಮಾಹಿತಿ ಹೊರಬಿದ್ದಿದೆ. ಮುಂಜಾಗೃತೆ ಕ್ರಮವಾಗಿ ಎಲ್ಲರೂ ಸ್ವಂತ ನಿರ್ಧಾರ ಮಾಡಿ ಮನೆಯಲ್ಲೇ ಇರಲು ನಿರ್ಧರಿಸಿದ್ದಾರೆ.
ಮೂವರು ಮಂತ್ರಿಗಳು ಕ್ವಾರಂಟೈನ್ ಗೆ ಒಳಗಾಗಿದ್ದು, ದೇಶದಲ್ಲೇ ಮೊದಲ ಪ್ರಕರಣವಾಗಿದ್ದು, ಇನ್ನೂ ಒಂದು ವಾರ ಮೂವರು ಮಂತ್ರಿಗಳು ಸಾರ್ವಜನಿಕವಾಗಿ ಲಭ್ಯವಿರಲ್ಲ.