Big Exclusive ಡಿಸಿಎಂ ಡಿ.ಕೆ.ಶಿವುಕುಮಾರ “ಪಿಎಸ್”ಗೆ ಅಪಘಾತ- ಹುಬ್ಬಳ್ಳಿಯತ್ತ ಡಿಸಿಎಂ ದೌಡು…!!! ಬೈಕ್ ಸವಾರ ಸ್ಥಳದಲ್ಲಿ ಸಾವು…
ಹುಬ್ಬಳ್ಳಿ: ಸವದತ್ತಿ ಬಳಿ ನಡೆದ ಅಪಘಾತವೊಂದರಲ್ಲಿ ಡಿಸಿಎಂ ಡಿಕೆ ಶಿವುಕುಮಾರ ಅವರ ಪಿಎಸ್ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕರ್ನಾಟಕವಾಯ್ಸ್.ಕಾಂಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಪಿಎಸ್ ಅವರಿದ್ದ ಕಾರು ಬೈಕಿಗೆ ಡಿಕ್ಕಿ ಹೊಡೆದಿದ್ದು, ಸವಾರನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಡಿಕ್ಕಿ ವೇಳೆಯಲ್ಲಿ ಪಿಎಸ್ ಇದ್ದ ಕಾರು ಪಲ್ಟಿಯಾಗಿ ಅದರಲ್ಲಿದ್ದವರು ಗಾಯಗೊಂಡಿದ್ದಾರೆ. ಅವರ ಸ್ಥಿತಿ ಅವಲೋಕಿಸಲು ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ್ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ.
Breaking Point…
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ಪ್ರಕರಣ.
ಅಪಘಾತದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವು.
ಸವದತ್ತಿ ಪಟ್ಟಣದ ನಿವಾಸಿ ಮಂಜುನಾಥ್ ಬೈರ್ನಟ್ಟಿ(30) ಮೃತ ದುರ್ದೈವಿ.
ಸಚಿವೆ ಹೆಬ್ಬಾಳ್ಕರ್ ಒಡೆತನದ ಹರ್ಷಾ ಸಕ್ಕರೆ ಕಾರ್ಖಾನೆಗೆ ಕೆಲಸಕ್ಕೆ ಹೊರಟ್ಟಿದ್ದ ಮಂಜುನಾಥ್.
ಈ ವೇಳೆ ಕಾರು ಗುದ್ದಿ ಮಂಜುನಾಥ್ ತಲೆ ಭಾಗಕ್ಕೆ ಗಂಭೀರಗಾಯವಾಗಿ ಸ್ಥಳದಲ್ಲೇ ಸಾವು.
ಅಪಘಾತದ ರಭಸಕ್ಕೆ ಪಲ್ಟಿಯಾದ ರಾಜೇಂದ್ರ ಪ್ರಸಾದ್ ಕಾರು.
ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
