ಧಾರವಾಡ ಜಿಲ್ಲೆಯಲ್ಲಿ ಶುರುವಾಗಿದೆ- “ಆನಂದ ಕಲಾಲ” ನೇತೃತ್ವದ “ಡಿಸಿಎಲ್” ಹವಾ…!
1 min readಮಾಜಿ ಸಚಿವ ಸಂತೋಷ ಲಾಡ ಅವರಿಗೆ ಧಾರವಾಡ ಜಿಲ್ಲೆಯಲ್ಲಿ ಅಭಿಮಾನಿಗಳಿಗೆ ಕೊರತೆಯಿಲ್ಲ. ಅವರು ಎಲ್ಲೆ ಇದ್ದರೂ, ಜಿಲ್ಲೆಯಲ್ಲಿ ಸಂತೋಷ ಲಾಡ ಹೆಸರು ಮಾತ್ರ ಸದಾಕಾಲ ಇರುವಂತೆ ಮಾಡುವ ಸಾವಿರಾರೂ ಯುವಕರು, ಲಾಡ ಜೊತೆಗಿರುವುದು ಈ ಮೂಲಕ ಕಂಡು ಬರುತ್ತದೆ..
ಧಾರವಾಡ: ಇಡೀ ರಾಜ್ಯದ ಪ್ರತಿ ಜಿಲ್ಲೆಯವರು ಹೊರಳಿ ನೋಡುವಂತಹ ‘ಧಾರವಾಡ ಕ್ರಿಕೆಟ್ ಲೀಗ್ ನ್ನ ಧಾರವಾಡದಲ್ಲಿ ಆಯೋಜನೆ ಮಾಡಲಾಗಿದ್ದು, ಮಾಜಿ ಸಚಿವ ಸಂತೋಷ ಲಾಡ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಮುಖಂಡ ಆನಂದ ಕಲಾಲ ನೇತೃತ್ವದ ಫಸ್ಟ್ ಕ್ರಿಕೆಟ್ ಅಕಾಡೆಮಿಯ ಮುಂದಾಳತ್ವದಲ್ಲಿ ನಡೆಯುತ್ತಿದೆ.
ಐಪಿಎಲ್, ಕೆಪಿಎಲ್ ಮಾದರಿಯಲ್ಲಿಯೇ ಆಯೋಜನೆಗೊಂಡಿರುವ ‘ಡಿಸಿಎಲ್’ ಮಾಜಿ ಸಚಿವ ಸಂತೋಷ ಲಾಡ ಅವರ ಹುಟ್ಟುಹಬ್ಬದ ಅಂಗವಾಗಿ ಆಯೋಜನೆಗೊಂಡಿದ್ದು, ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶದ ಕ್ರಿಕೆಟ್ ಆಟಗಾರರು ಭಾಗವಹಿಸುತ್ತಿದ್ದಾರೆ.
ಮಾಜಿ ಸಚಿವ ಸಂತೋಷ ಲಾಡ ಪ್ರತಿನಿಧಿಸುವ ಕಲಘಟಗಿ ಕ್ಷೇತ್ರದ 30ಕ್ಕೂ ಹೆಚ್ಚು ಆಟಗಾರರು, ಡಿಸಿಎಲ್ ನಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಏಪ್ರೀಲ್ 2ರಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಮಾಜಿ ಸಚಿವ ಸಂತೋಷ ಲಾಡ “ಡಿಸಿಎಲ್” ಉದ್ಘಾಟನೆ ಮಾಡಲಿದ್ದು, ಅಂದು ಡಿಸಿ ಇಲೆವನ್ ಮತ್ತು ಮೀಡಿಯಾ ಇಲೆವನ್ ನಡುವೆ ಪಂದ್ಯ ಆಯೋಜನೆ ಮಾಡಲಾಗಿದೆ.
ಆನಂದ ಕಲಾಲ ಮಹತ್ವಾಕಾಂಕ್ಷೆಯಿಂದ ಆರಂಭಿಸಿದ ಡಿಸಿಎಲ್ ಗೆ ಫಸ್ಟ್ ಕ್ರಿಕೆಟ್ ಅಕಾಡೆಮಿಯ ಸಂದೀಪ ಪೈ ಸಾಥ್ ನೀಡಿದ್ದು, ಇವರಿಬ್ಬರ ಕೆಮಿಸ್ಟ್ರೀ ಹೇಗೆ ವರ್ಕ್ ಔಟ್ ಆಗಿದೆ ಎಂಬುದನ್ನ ಇದೊಂದು ವೀಡಿಯೋ ನೋಡುವ ಮೂಲಕ ತಿಳಿಯಬಹುದು.
ಆನಂದ ಕಲಾಲ ಅವರ ಹುಟ್ಟುಹಬ್ಬ ಏಪ್ರೀಲ್ 10ರಂದಿದೆ. ಅಂದೇ ಪೈನಲ್ ಮ್ಯಾಚ್ ಕೂಡಾ ನಡೆಯಲಿದ್ದು, ಮಾಜಿ ಸಚಿವ ಸಂತೋಷ ಲಾಡ ಸೇರಿದಂತೆ ಚಿತ್ರನಟರು, ಹಲವು ಗಣ್ಯರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿನ ಕ್ರಿಕೆಟ್ ಪ್ರೇಮಿಗಳಲ್ಲಿ ಹೊಸತನ ಮೂಡಿಸುವ ಜೊತೆಗೆ ರೋಮಾಂಚನ ಮೂಡಿಸುವಲ್ಲಿ ಡಿಸಿಎಲ್ ಮುನ್ನಡೆಯುತ್ತಿದ್ದು, ಇದಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಆನಂದ ಕಲಾಲ ಬಳಗಕ್ಕೆ, ಕ್ರಿಕೆಟ್ ಪ್ರೇಮಿಗಳು ಚಿರಋಣಿಯಾಗಿರಲಿದ್ದಾರೆ.