ಧಾರವಾಡ “ಡಿಸಿಎಲ್” ಗೆ ಅದ್ಧೂರಿ ಚಾಲನೆ…!
1 min readಧಾರವಾಡ: ಕ್ರೀಡಾ ಪ್ರೇಮಿ ಹಾಗೂ ಮಾಜಿ ಸಚಿವ ಸಂತೋಷ ಲಾಡ್ ಸಹಯೋಗದೊಂದಿಗೆ ಪಸ್ಟ್ ಕ್ರಿಕೆಟ್ ಅಕಾಡೆಮಿ ವತಿಯಿಂದ ಧಾರವಾಡ ಜಿಲ್ಲೆಯ ಕ್ರಿಕೆಟ್ ಪ್ರತಿಭೆಗಳಿಗೆ ಸೂಕ್ತ ವೇದಿಕೆ ನೀಡಿ ಪ್ರೋತ್ಸಾಹಿಸುವ ಸದುದ್ದೇಶದಿಂದ ಹಾಗೂ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆ ನೀಡುವ ಉದ್ದೇಶದಿಂದ ಧಾರವಾಡದಲ್ಲಿ ಆಯೋಜಿಸಲಾಗಿರುವ ಹಾರ್ಡ್ ಟೆನ್ನಿಸ್ ಕ್ರಿಕೆಟ್ ಟೂರ್ನಾಮೆಂಟ್ “ಧಾರವಾಡ ಚಾಂಪಿಯನ್ಸ್ ಲೀಗ್-2021 ಗೆ ಅದ್ದೂರಿ ಚಾಲನೆ ದೊರೆತಿದೆ.
ಒಟ್ಟು ಎಂಟು ತಂಡಗಳು ಟೂರ್ನಾಮೆಂಟ್ ನಲ್ಲಿ ಆಟ ಆಡಲು ಅವಕಾಶ ಕಲ್ಪಿಸಲಾಗಿದ್ದು, ಧಾರವಾಡ ಸ್ಟಾರ್ಸ್, ಧಾರವಾಡ ಪ್ಯಾಂಥರ್ಸ್, ಧಾರವಾಡ ಬುಲ್ಸ್, ಧಾರವಾಡ ಹಂಟರ್ಸ್, ನಕ್ಷತ್ರ ಇಲಿವೆನ್, ಮಿಲಿಯನ್ ವಾರಿಯರ್ಸ್, ಕಮಲಾಪೂರ ಕಿಂಗ್ಸ್, ಆರ್.ಟಿ.ಎಸ್ ಇಲೆವೆನ್ ತಂಡಗಳು ಭಾಗವಹಿಸುತ್ತಿವೆ.
ಉದ್ಘಾಟನಾ ಪಂದ್ಯವನ್ನ ಜಿಲ್ಲಾಧಿಕಾರಿಗಳ ನೇತೃತ್ವದ ಡಿಸಿ ಇಲೆವೆನ್ ಹಾಗೂ ಮೀಡಿಯಾ ಇಲೆವೆನ್ ತಂಡ ಕ್ರೀಡಾಂಗಣದಲ್ಲಿ ಆಟ ಪ್ರಾರಂಭಿಸಿದ್ದು, ಮೀಡಿಯಾ ಇಲೆವೆನ್ ತಂಡ 5 ವಿಕೆಟ್ ಪತನಕ್ಕೆ 47 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಡಿಸಿ ಇಲೆವೆನ್ ತಂಡ 2 ವಿಕೆಟ್ ಪತನಕ್ಕೆ 48 ರನ್ ಗಳಿಸಿ ವಿಜಯ ಪತಾಕೆ ಹಾರಿಸಿದರು. ಅಲ್ಲದೇ ರೆವಿನ್ಯೂ ಇನ್ಸ್ಪೆಕ್ಟರ್ ಮಂಜುನಾಥ ಗೂಳಪ್ಪನವರ 25 ರನ್ ಮೂಲಕ ಆಕರ್ಷಕ ಆಟವನ್ನು ಪ್ರದರ್ಶನ ಮಾಡಿದರು. ಪಸ್ಟ್ ಕ್ರಿಕೆಟ್ ಅಕಾಡೆಮಿಯು ಕ್ರಿಕೆಟ್ ರಂಗದಲ್ಲಿ ಸಾಕಷ್ಟು ಕನಸನ್ನು ಕಟ್ಟಿಕೊಂಡು ಸಾಗುತ್ತಿರುವ ಸಂಸ್ಥೆಯಾಗಿದ್ದು, ಪ್ರತಿಭೆಗಳ ಪ್ರೋತ್ಸಾಹ ಹಾಗೂ ಕ್ರೀಡೆಗಳ ಅಭಿವೃದ್ಧಿಯ ಧೇಯ್ಯೋದ್ದೇಶವನ್ನು ಸಂಸ್ಥೆಯು ಹೊಂದಿದೆ.
ಉದ್ಘಾಟನೆ ಕಾರ್ಯಕ್ರಮದಲ್ಲಿ ಹೆಸ್ಕಾಂ ಜಾಗೃತದಳದ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ, ಕೆಪಿಸಿಸಿ ಸದಸ್ಯ ದೀಪಕ ಚಿಂಚೂರೆ, ಅಂಜುಮನ್ ಇಸ್ಲಾಂ ಸಂಸ್ಥೆಯ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಾಟಗರ, ಕೆ.ಎಸ್.ಸಿ.ಎ ಮುಖ್ಯಸ್ಥರು ಹಾಗೂ ಪಾಲಿಕೆ ಮಾಜಿ ಸದಸ್ಯ ಅಲ್ತಾಫ್ ಕಿತ್ತೂರ, ಟೂರ್ನಿಯ ನೇತೃತ್ವ ವಹಿಸಿರುವ ಎನ್.ಡಬ್ಲೂ.ಕೆ.ಆರ್.ಟಿ.ಸಿ ಮಾಜಿ ನಿರ್ದೇಶಕ ಆನಂದ ಕಲಾಲ್, ಪಸ್ಟ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಸಂದೀಪ್ ಪೈ ಸೇರಿದಂತೆ ಇತರರು ಉಪಸ್ಥಿತರಿದ್ದರು.