Posts Slider

Karnataka Voice

Latest Kannada News

ಜಿಲ್ಲಾಧಿಕಾರಿಗೆ ಸೆಡ್ಡು ಹೊಡೆದು ಸರ್ಜನ್ ಹುದ್ದೆಗೆ ಬಂದ ಡಾ. ನಾಗರಾಜ್

1 min read
Spread the love

ದಾವಣಗೆರೆ: ಮೇ 12 ರಂದು ಜಿಲ್ಲಾಸ್ಪತ್ರೆಯ ಸರ್ಜನ್ ಹುದ್ದೆಯಿಂದ ಬಿಡುಗಡೆಗೊಳಿಸಿದ್ದ ಜಿಲ್ಲಾಧಿಕಾರಿ‌ ಮಹಾಂತೇಶ ಬೀಳಗಿಯವರಿಗೆ ಸೆಡ್ಡು ಹೊಡೆದು ಮತ್ತೆ ಜಿಲ್ಲಾ ಆಸ್ಪತ್ರೆ ಸರ್ಜನ್ ಕುರ್ಚಿಯನ್ನ ಡಾ.ನಾಗರಾಜ್  ಗಿಟ್ಟಿಸಿಕೊಂಡಿದ್ದಾರೆ.

ಕೋವಿಡ್ ನಿಯಂತ್ರಣಕ್ಕೆ ತರುವಲ್ಲಿ ಅಸಮರ್ಥರಾಗಿದ್ದೀರಿ ಎಂದು ಡಾ.ನಾಗರಾಜರನ್ನ ಹುದ್ದೆಯಿಂದ ಬಿಡುಗಡೆ ಮಾಡಲಾಗಿತ್ತು. ಹುದ್ದೆಯಿಂದ ಬಿಡುಗಡೆಗೊಳಿಸಿದ ಕೆಲ ದಿನಗಳಲ್ಲಿ ಅದೇ ಕುರ್ಚಿಗೆ ಬಂದು ಡಾ.ನಾಗರಾಜ್ ಕುಳಿತಿದ್ದು, ಅವರ ಪ್ರಭಾವ ಎಷ್ಟಿದೆ ಎನ್ನುವುದು ಗೊತ್ತಾಗಿದೆ. ಸರ್ಜನ್ ಹುದ್ದೆಗೆ ಡಾ.ನಾಗರಾಜ್ ಅವರನ್ನ ಮರು ನೇಮಕ ಮಾಡಿ ಆರೋಗ್ಯ ಇಲಾಖೆ ಅಧೀನ ಕಾರ್ಯದರ್ಶಿ ಶಿವಶಂಕರ ಆದೇಶ ಹೊರಡಿಸಿದ್ದಾರೆ.

ರಾಜ್ಯ ಸರ್ಕಾರದ ಅಧಿಕೃತ ಆದೇಶ ಪಡೆದು ಸರ್ಜನ್ ಡಾ.ನಾಗರಾಜ್ ಕುರ್ಚಿ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ ಆದೇಶ ಕೇವಲ ಕೆಲವೇ ದಿನಗಳಿಗೆ ಮಾತ್ರ ಸಿಮೀತವಾದಂತಾಗಿದೆ.


Spread the love

Leave a Reply

Your email address will not be published. Required fields are marked *

You may have missed