ಸಪ್ತಪದಿ ತುಳಿಯಲು 19ಕಂಡೀಷನ್: ಮದುವೆಗೆ ಸಿಸಿ ಕ್ಯಾಮರಾ ಹಾಕಬೇಕಂತೆ

ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಇಂದಿನಿಂದ ಲಾಕ್ ಡೌನ್ 4.0 ಜಾರಿಯಾಗಿದ್ದು, ಸಪ್ತಪದಿ ತುಳಿಯಲು ಹತ್ತೊಂಬತ್ತು ಕಂಡಿಷನ್ ಹಾಕಲಾಗಿದ್ದು, ಸಿಸಿ ಕ್ಯಾಮರಾ, ಸೆಕ್ಟರ್ ಮ್ಯಾಜಿಸ್ಟ್ರೇಟ್ ಕಣ್ಗಾವಲಿನಲ್ಲಿ ಮದುವೆ ಸಮಾರಂಭ ನಡೆಸುವಂತೆ ಆದೇಶ ಮಾಡಲಾಗಿದೆ.
ಹಸಿರು ಜಿಲ್ಲೆಯಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮದುವೆ ಸಮಾರಂಭವನ್ನ ಸಂಪೂರ್ಣ ನಿಷೇಧ ಮಾಡಲಾಗಿತ್ತು. ದೇವಸ್ಥಾನ, ಮಸೀದಿ ಚರ್ಚ್ ಗಳಲ್ಲಿ ಮದುವೆ ನಿಷಿದ್ದ ಮಾಡಲಾಗಿದೆ. ಕಲ್ಯಾಣ ಮಂಟಪಗಳಲ್ಲಿ ಮಾತ್ರ ಅವಕಾಶವಿದೆ. ಹೆಣ್ಣು ಗಂಡು ಸೇರಿ ಐವತ್ತು ಜನರಿಗೆ ಮಾತ್ರ ಮದುವೆಗೆ ಪರ್ಮಿಟ್. ಪ್ರತಿ ಮದುವೆಯಲ್ಲೂ ನೋಡಲ್ ಅಧಿಕಾರಿ ಹಾಜರಿರಬೇಕು. ಅಂತರ ಜಿಲ್ಲಾ, ಅಂತರರಾಜ್ಯ ವಾಹನಗಳನ್ನ ಸ್ಯಾನಿಟೈಜ್ ಮಾಡುವುದು ಕಡ್ಡಾಯವಾಗಿದ್ದು, ಹೊರ ಜಿಲ್ಲೆ ಹೊರ ರಾಜ್ಯದಿಂದ ಬಂದವರು ನೋಡಲ್ ಅಧಿಕಾರಿ ಬಳಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಮಾಹಿತಿ ನೀಡಿದ್ದಾರೆ.