ಆರೋಗ್ಯ ಸಮೀಕ್ಷೆಯಲ್ಲಿ ಅಂಗನವಾಡಿ ಟೀಚರ್ ಕೂಡ ಭಾಗಿ: ಫಲ ಕೊಟ್ಟ ಜಿಲ್ಲಾಧಿಕಾರಿ ಪ್ರಯತ್ನ
1 min readಹುಬ್ಬಳ್ಳಿ: ಆರೋಗ್ಯ ಸಮೀಕ್ಷೆ ಕಾರ್ಯವನ್ನ ಸಾಮಾನ್ಯವಾಗಿ ಎಲ್ಲೆಡೆ ಆಶಾ ಕಾರ್ಯಕರ್ತರು ಮಾಡುತ್ತ ಬಂದಿದ್ದಾರೆ. ಆದರೆ, ಹುಬ್ಬಳ್ಳಿಯ ಕಂಟೈನಮೆಂಟ್ ಪ್ರದೇಶ ದೊಡ್ಡದಾಗಿರುವುದರಿಂದ ಜಿಲ್ಲಾಧಿಕಾರಿ ದೀಪಾ ಚೋಳನ್ ವಿಶೇಷ ಪ್ರಯತ್ನಪಟ್ಟು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕಿಯರನ್ನೂ ಈ ಕಾರ್ಯದಲ್ಲಿ ತೊಡಗುವಂತೆ ಮಾಡಿದ್ದಾರೆ.
ಹುಬ್ಬಳ್ಳಿಯ ಮುಲ್ಲಾ ಓಣಿಯಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಆರೋಗ್ಯ ಗಣತಿ ಕಾರ್ಯವನ್ನ ಆರಂಭ ಮಾಡಲಾಗುತ್ತಿದೆ. ಇದಕ್ಕೆ ಆಶಾ ಕಾರ್ಯಕರ್ತರಷ್ಟೇ ಕಾರ್ಯನಿರ್ವಹಿಸಿದರೇ ಹೆಚ್ಚಿನ ಸಮಯ ಬೇಕಾಗತ್ತೆ. ಇದೇ ಕಾರಣಕ್ಕೆ ಡಿಸಿಯವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಕಾರ್ಯಕರ್ತರನ್ನೂ ಮತ್ತು ಮೇಲ್ವಿಚಾರಕರನ್ನೂ ಸಮೀಕ್ಷೆ ನಡೆಸುವಂತೆ ಕೇಳಿಕೊಂಡು ಯಶಸ್ವಿಯಾಗಿದ್ದಾರೆ. ಹಾಗಾಗಿ, ಇಂದಿನಿಂದಲೇ ಸಮೀಕ್ಷೆ ತ್ವರಿತವಾಗಿ ಆರಂಭಗೊಂಡಿದೆ.