“ಕೋ”ಳಿವಾಡದ ಅಳಿಯ “ಕೋ”ಗಿಲಗೇರಿಯಲ್ಲಿ ಚಕ್ಕಡಿ ಏರಿದರು…!

ಧಾರವಾಡ: ಜನರ ಬಳಿ ಸರಕಾರ ಎನ್ನುವ ಘೋಷವಾಕ್ಯದೊಂದಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಂದು ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಧಾರವಾಡದ ಜಿಲ್ಲಾಧಿಕಾರಿ ಚಕ್ಕಡಿ ಹೊಡೆಯುತ್ತಲೇ ಗ್ರಾಮಕ್ಕೆ ಎಂಟ್ರಿ ಕೊಟ್ಟು, ನಾನೂ ನಿಮ್ಮವನೇ ಎಂದು ತೋರಿಸುವ ಪ್ರಯತ್ನವನ್ನ ಮಾಡಿದರು.
ಮೂಲತಃ ವಿಜಯಪುರ ಜಿಲ್ಲೆಯವರಾಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಅವರ ಮಾವನವರ ಕೋಳಿವಾಡ. ರೈತಾಪಿ ಕುಟುಂಬದ ಹಿನ್ನೆಲೆ ಹೊಂದಿದವರು. ಹಾಗಾಗಿಯೇ, ತಾವೊಬ್ಬ ಐಪಿಎಸ್ ಎನ್ನುವುದಕ್ಕಿಂತ ಹೆಚ್ಚಾಗಿ, ರೈತ ಕುಟುಂಬದವ ಎನ್ನುವ ಹಾಗೇ ಜಿಲ್ಲಾಧಿಕಾರಿಗಳು ಕೋಗಿಲಗೇರಿ ಗ್ರಾಮದೊಳಗೆ ಬಂದರು.
ಗ್ರಾಮಕ್ಕೆ ಬರುತ್ತಿದ್ದ ಹಾಗೇ ಗ್ರಾಮಸ್ಥರು, ಗೌರವಪೂರ್ವಕವಾಗಿ ಬರಮಾಡಿಕೊಂಡರು. ಸಿಂಗರಿಸಿದ್ದ ಚಕ್ಕಡಿಯಲ್ಲಿ ಹತ್ತಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ಎತ್ತಿನ ಹಗ್ಗವನ್ನ ತಾವೇ ಹಿಡಿದು ಮುನ್ನಡೆಸಿದರು.
ಗ್ರಾಮದ ಪಡಿತರ ಅಂಗಡಿಗಳಿಗೆ ತಾವೇ ತೆರಳಿ, ಅಲ್ಲಿನ ತೊಂದರೆಗಳ ಬಗ್ಗೆ ಮಾಹಿತಿಯನ್ನ ಪಡೆದರು.