ದಾವಣಗೆರೆ ನಗರದಲ್ಲಿ ಕೊರೋನಾ ಅಟ್ಟಹಾಸ: ಗೃಹ ಸಚಿವರ ಭೇಟಿ

ದಾವಣಗೆರೆ: ಜಿಲ್ಲೆಯಲ್ಲಿ ೬೧ಕ್ಕೆ ತಲುಪಿದ ಸೋಂಕಿತರ ಸಂಖ್ಯೆಯಿಂದ ಆತಂಕ ಹೆಚ್ಚಾಗಿದೆ. ಈ ಅನಿರೀಕ್ಷಿತ ಬೆಳೆವಣಿಗೆ ಎಚ್ಚತ್ತುಕೊಂಡ ರಾಜ್ಯ ಸರ್ಕಾರ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ದಾವಣಗೆರೆ ನಗರದ ಹೊರವಲಯದ ಜಿಎಂಐಟಿ ಗೆಸ್ಟ ಹೌಸ್ ನಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಸ್ಪಿ ಹನುಮಂತರಾಯ ಅವರ ಜೊತೆ ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ ಸಚಿವರು, ಕೊರೋನಾ ತಡೆಯಲು ತೆಗೆದುಕೊಂಡಿರುವ ಕ್ರಮದ ಬಗ್ಗೆ ಮಾಹಿತಿ ಪಡೆದರು. ಈಗಾಗಲೇ ಗುರತಿಸಿರುವ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಜನರಿಗೆ ಮತ್ತಷ್ಟು ತಿಳುವಳಿಕೆ ನೀಡಿ, ಹೊರಗೆ ಬರದಂತೆ ತಡೆಯಬೇಕೆಂದು ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಂಸದ ಜಿಎಂ ಸಿದ್ದೇಶ್ವರ ಉಪಸ್ಥಿತರಿದ್ದರು.