ಮಗಳಿಗಾಗಿ ಪೊಲೀಸ್ ಠಾಣೆಯೆದುರೇ ನೇಣಿಗೆ ಶರಣಾಗಲು ನಿಂತಿದ್ದ ಅಪ್ಪ
1 min readಧಾರವಾಡ: ಕಳೆದು ಹೋದ ಮಗಳನ್ನ ಹುಡುಕಿ ಕೊಡಿ ಎಂದು ಬೇಡಿಕೊಂಡರು ಪೊಲೀಸರು ಪ್ರಯತ್ನವನ್ನೇ ಮಾಡುತ್ತಿಲ್ಲವೆಂದು ಬೇಸರಗೊಂಡ ತಂದೆಯೋರ್ವ ಠಾಣೆ ಎದುರೇ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಘಟನೆ ಧಾರವಾಡದಲ್ಲಿಂದು ನಡೆದಿದೆ.
ತಂದೆಯ ನೋವಿನ ಎಕ್ಸಕ್ಲೂಸಿವ್ ವೀಡಿಯೋ..
https://www.youtube.com/watch?v=CJEmd2PVkNg
ಧಾರವಾಡ ತಾಲೂಕಿನ ಮರೆವಾಡ ಗ್ರಾಮದ ಮುದ್ದಪ್ಪ ಜಂಗಳಿ ಎಂಬಾತನೇ ಮಹಿಳಾ ಠಾಣೆಯ ಮುಂದೆ ಮರವನ್ನೇರಿ ಆತ್ಮಹತ್ಯೆಗೆ ಯತ್ನಿಸಿದ ಬಡಪಾಯಿ ತಂದೆ. ನವೆಂಬರ್ 23ರಂದೇ ಮಗಳು ಕಾಣೆಯಾಗಿದ್ದು, ಇಲ್ಲಿಯವರೆಗೆ ಹುಡುಕುತ್ತಿಲ್ಲವೆಂದು ಬೇಸರಗೊಂಡಿದ್ದ ಮುದ್ದಪ್ಪ, ಜನರ ಎದುರೇ ಮರವನ್ನೇರಲು ಪ್ರಯತ್ನಪಟ್ಟ.
ಬಸಮ್ಮ ಎಂಬ ಯುವತಿಯನ್ನ ಮಡ್ಡಿಗಿರಿಯಾಲ ಗ್ರಾಮದ ಗಂಗಪ್ಪ ಚುರಮರಿ ಎಂಬ ಯುವಕ ಅಪಹರಣ ಮಾಡಿದ್ದಾನೆಂದು ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮವನ್ನ ಜರುಗಿಸಿಲ್ಲ. ಇದರಿಂದ ಮನನೊಂದ ತಂದೆ ಇಂದು ಮಹಿಳಾ ಠಾಣೆಯ ಮುಂದೆನೇ ಹೀಗೆಲ್ಲ ಮಾಡಿದ್ರು.
ಠಾಣೆಯ ಮುಂದೆ ಜಮಾವಣೆಗೊಂಡ ಜನರು, ಮುದ್ದಪ್ಪ ಜಂಗಳಿಯನ್ನ ತಡೆಯುವ ಪ್ರಯತ್ನ ಮಾಡಿದ್ರು. ಕೊನೆಗೆ ಪೊಲೀಸರು ಬಂದು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ರು. ಆದರೆ, ಮಗಳನ್ನ ಕಳೆದುಕೊಂಡ ಅಪ್ಪನ ಕಣ್ಣೀರು ಮಾತ್ರ ನಿರಂತರವಾಗಿತ್ತು.