ದಾಸ್ತಿಕೊಪ್ಪದಲ್ಲಿ ಅಂದರ್-ಬಾಹರ್: 22ಜನರ ಬಂಧನ-9600ರಷ್ಟೇ ಪತ್ತೆ…!

ಕಲಘಟಗಿ: ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ಶ್ರೀ ಬಸವಣ್ಣ ದೇವರ ದೇವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಆಡುತ್ತಿದ್ದ 22 ಜನರನ್ನ ಬಂಧನ ಮಾಡುವಲ್ಲಿ ಕಲಘಟಗಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ದಾಸ್ತಿಕೊಪ್ಪ ಗ್ರಾಮದ ಗೃಹ ರಕ್ಷಕ ದಳದ ದ್ಯಾಮಣ್ಣ ರುದ್ರಗೌಡ ರಾಯನಗೌಡ್ರ,ಡ್ರೈವರ್ ನಾಗಯ್ಯ ಶಂಕ್ರಯ್ಯ ಪೂಜಾರ, ಮಂಜುನಾಥ ಶಿವಕಲ್ಲಪ್ಪ ತಿಪ್ಪನಗೌಡತಿ, ಬಸವರಾಜ ಈರಪ್ಪ ಗಂಜಿಗಟ್ಟಿ, ಅಣ್ಣಪ್ಪ ಶಿವಾಜಿ ಶರಣುಭತ್ತ, ಸುನೀಲ ಉಮೇಶ ಪಾತ್ರೋಟಿ, ಪ್ರಕಾಶ ಮಾದೇವಪ್ಪ ರಾಮನಾಳ, ಮಂಜುನಾಥ ಬಸವಣ್ಣೆಪ್ಪ ಹುಲ್ಲಂಬಿ, ಪ್ರಶಾಂತ ಗೂಳಪ್ಪ ಬಸ್ತಿ, ಈರಪ್ಪ ಮಾದೇಪ್ಪ ಸವಣೂರ, ಮೌನೇಶ ಶಿವಪುತ್ರಪ್ಪ ಬಡಿಗೇರ, ಸಂತೋಷ ಚನ್ನಪ್ಪ ಕೊಪ್ಪದ, ಪಕ್ಕೀರೇಶ ಶಂಕ್ರಪ್ಪ ಹುಚ್ಚಣ್ಣವರ, ಮಂಜುನಾಥ ಗೂಳಪ್ಪ ಮರೇವಾಡ, ರವಿ ಪದ್ಮಪ್ಪ ಕ್ಯಾಮಪ್ಪನವರ, ಕಲ್ಲಪ್ಪ ಪಕ್ಕಿರಪ್ಪ ಹುಚ್ಚಣ್ಣವರ, ಶ್ರೀಧರ ಶಿವಪುತ್ರಪ್ಪ ಬಂಗಾಳಿ, ನಿಂಗಪ್ಪ ಮಲ್ಲಶೇಪ್ಪ ನುಗ್ಗಿಕೇರಿ, ಕುಮಾರ ಬಸವಣ್ಣೇಪ್ಪ ಹೊಸುರು, ದಾನಪ್ಪ ಷಣ್ಮುಖಪ್ಪ ಸವಣೂರು, ಬಸವರಾಜ ನಿಂಗಪ್ಪ ಹುಲ್ಲಂಬಿ, ಬಸವರಾಜ ಪಂಚಪ್ಪ ಕಬ್ಬೇರ ಬಂಧಿತರೆಂದು ಗುರುತಿಸಲಾಗಿದೆ.
ಬಂಧಿತರಿಂದ 9600 ರೂಪಾಯಿ ನಗದು ಹಾಗೂ ಅಂದರ್-ಬಾಹರಗೆ ಬಳಕೆ ಮಾಡಿದ 52 ಎಲೆಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಾಗಿದೆ.