ಚಾಕು-ಖಾರದಪುಡಿ-ಕಲ್ಲು-ದೊಣ್ಣೆ ಹಿಡಿದಿದ್ದ ದರೋಡೆಕೋರರ ಬಂಧನ
ಉತ್ತರಕನ್ನಡ: ಮಾರಕಾಸ್ತ್ರಗಳನ್ನ ಹಿಡಿದುಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆಗೆ ಸ್ಕೆಚ್ ಹಾಕಿದ್ದ ತಂಡವನ್ನ ಹೊನ್ನಾವರದ ಮಂಕಿ ಗ್ರಾಮದ ಬಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖಾರದಪುಡಿ, ಚಾಕು, ಕಲ್ಲು, ದೊಣ್ಣೆಯೊಂದಿಗೆ ಬೆದರಿಸಿ ದರೋಡೆಗೆ ಮುಂದಾಗಿದ್ದ ಅಬ್ದುಲಸಲಾಂ ಬ್ಯಾರಿ, ಅಬ್ದುಲರಸೀದ, ಹಬೀಬವುಲ್ಲಾ ಮತ್ತು ತನ್ವೀರ ತನ್ನು ಎಂಬುವವರನ್ನ ಬಂಧನ ಮಾಡಲಾಗಿದ್ದು, ಫಯಾಜ್ ಪಕ್ರಧಿ ಮತ್ತು ಸಜ್ಜಾದ ಬಿದರಕಟ್ಟೆ ಪರಾರಿಯಾಗಿದ್ದಾರೆ.
ದರೋಡೆಗೆ ಬಳಕೆ ಮಾಡುತ್ತಿದ್ದ KA-19 P-3030 ಸಫಾರಿ ವಾಹನವನ್ನ ವಶಕ್ಕೆ ಪಡೆಯಲಾಗಿದ್ದು, ಮಾರಕಾಸ್ತ್ರಗಳನ್ನ ಜಪ್ತಿ ಮಾಡಲಾಗಿದೆ. ಪ್ರಕರಣ ಮಂಕಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪರಾರಿಯಾದವರ ಶೋಧ ಕಾರ್ಯ ಮುಂದುವರೆದಿದೆ.