ದಿನಪತ್ರಿಕೆ ನಿಮ್ಮ “ಕೈ” ಸೇರಿಸುವ ಈ ಹುಡುಗನ ಬದುಕು ಎಷ್ಟು ದುರ್ಭರ ಗೊತ್ತಾ… ಆತನ ಖುಷಿಗಾಗಿ ‘ಮನೋಹರ’ ಮಾಡಿದ್ದೇನು..!?

ಧಾರವಾಡ: ಹದಿನೆಂಟರ ಹೊಸ್ತಿಲ್ಲನ್ನ ದಾಟಿದ ಈ ಹುಡುಗನಿಗೆ ತಂದೆಯಿಲ್ಲ. ತಾಯಿ ದಿನವೂ ಹೂಕಟ್ಟಿ ಜೀವನ ನಡೆಸ್ತಾಳೆ. ಹಾಗಾಗಿಯೇ ಈ ಯುವಕ ತಾಯಿಗೆ ಹೆಗಲಾಗಲು ವಿದ್ಯಾಭ್ಯಾಸ ಮಾಡುತ್ತಲೇ ದಿನಪತ್ರಿಕೆ ಕೊಡಲು ಬೆಳಗಿನ ಜಾವ ಸೈಕಲ್ ಏರುತ್ತಾನೆ. ಇಂತಹ ಯುವಕನಿಗಿವತ್ತು ಸಂತಸದ ಕ್ಷಣ ಎದುರಾಗಿತ್ತು.
ಹೌದು… ಸಂತೋಷ ಕೊಡಲು ಕಾರಣವಾಗಿದ್ದು ಬರ್ತಡೇ ಬಾಯ್ ಮಾಲೀಕ ಮನೋಹರ ಎನ್ನುವವರು. ಪೂರ್ಣ ವಿವರ ಈ ವೀಡಿಯೋದ ಕೆಳಗಡೆಯಿದೆ ಓದಿ.
ಯಶವಂತ ಹೊನ್ನಳ್ಳಿ ಧಾರವಾಡದ ಸಾಯಿ ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಮಾಡ್ತಾನೆ. ತನಗೆ ತಂದೆಯಿಲ್ಲ, ಜೊತೆಗೆ ಒಡಹುಟ್ಟಿದವರು ಇಲ್ಲ ಎಂಬುದನ್ನ ಅರಿತು, ತಾಯಿಗೆ ಜೊತೆಯಾಗಿ ಜೀವನ ನಡೆಸುತ್ತಿದ್ದಾನೆ.
ಮಳೆ, ಚಳಿಯಲ್ಲೂ ಯಾವುದೇ ರೀತಿಯ ಅಳುಕಿಲ್ಲದೇ ದಿನಬೆಳಗಾದರೇ ಮನೆ ಮನೆಗೆ ದಿನಪತ್ರಿಕೆಗಳನ್ನ ತಲುಪಿಸುತ್ತಾನೆ. ಅದೇ ಹಣದಿಂದ ತನ್ನ ವಿದ್ಯಾಭ್ಯಾಸ ನಡೆಸುತ್ತಿದ್ದಾನೆ. ಆತನ ಸ್ಥಿತಿ ಗೊತ್ತಿರುವ ಮನೋಹರ ಅವರು ಯಶವಂತನ ಹುಟ್ಟುಹಬ್ಬವನ್ನ ಆತನ ಸಂಗಡಿಗರ ಜೊತೆ ಆಚರಿಸುವಂತೆ ನೋಡಿಕೊಂಡರು.
ಇವತ್ತು ಯಶವಂತನ ಖುಷಿಗೆ ಪಾರವೇ ಇರಲಿಲ್ಲ. ಬಡವರ ಮಕ್ಕಳಿಗೆ ಇಂತಹ ಖುಷಿ ಸಿಗೋದೆ ಅಪರೂಪ. ಅದನ್ನ ಸದ್ದಿಲ್ಲದೇ ಮಾಡಿಸಿದ ಮನೋಹರ ಅವರು ಕೂಡ ಶ್ಲಾಘನೀಯ ಕೆಲಸ ಮಾಡಿದ್ದಾರೆ.
ಯಶವಂತ ಹೊನ್ನಳ್ಳಿಯ ಜೀವನ ಸುಖಕರವಾಗಲಿ. ಆತನ ಇಚ್ಚೆ ಈಡೇರಲಿ ಎಂದು ಕರ್ನಾಟಕವಾಯ್ಸ್.ಕಾಂ ಕೂಡ ಪ್ರಾರ್ಥಿಸತ್ತೆ. ಇಂತಹ ಯುವಕನ ಸಹಾಯಕ್ಕೆ ಶಿಕ್ಷಣ ಪ್ರೇಮಿಗಳು ಬರಬೇಕಿದೆ.