ನಿಷಾ-ಶಾಂತನು ಹೆಸರಿನಲ್ಲಿ ನಿಮಗೆ ಕಾಲ್ ಬಂದಿದ್ರೇ ಹುಷಾರಾಗಿ: ಇಲ್ಲದಿದ್ರೇ ಏನಾಗತ್ತೆ ಗೊತ್ತಾ..?
ಹುಬ್ಬಳ್ಳಿ: ಡಾಟಾ ಎಂಟ್ರಿ ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಸೈಬರ್ ಕ್ರೈಂ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನ್ ಲೈನ್ ದಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದವರಿಗೆ ಕರೆ ಮಾಡಿದ್ದ ನಿಷಾ ಮತ್ತು ಶಾಂತನು ಎಂಬಿಬ್ಬರು ದೂರುದಾರರಿಗೆ ಕಾಲ್ ಮಾಡಿ, ನಂಬಿಸಿ ಮೋಸ ಮಾಡಿದ್ದಾರೆ.
ಆರೋಪಿತರ ಐ.ಡಿ.ಬಿ.ಐ ಬ್ಯಾಂಕ ಖಾತೆ ನಂಬರ 1338104000045377ಗೆ ಹಣವನ್ನ ವಿವಿಧ ರೀತಿಯಲ್ಲಿ ಹೇಳಿಕೊಂಡು ಹಂತ ಹಂತವಾಗಿ ಒಟ್ಟು 1ಲಕ್ಷ 41ಸಾವಿರದಾ 450 ರೂಪಾಯಿಗಳನ್ನ ತಮ್ಮ ಎಸ್.ಬಿ.ಐ ಬ್ಯಾಂಕ ಖಾತೆ ನಂಬರಗೆ ಲಿಂಕ್ ಇರುವ ಪೋನ್ ಪೇ ಖಾತೆ ನಂಬರದಿಂದ ಆನ್ ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ.
ಹಣ ಸಂಪೂರ್ಣವಾಗಿ ಅವರಿಗೆ ತಲುಪಿದ ನಂತರ ಸಂಪರ್ಕ ಕಡಿತಗೊಂಡಿದ್ದು, ಹಣವನ್ನ ಯಾಮಾರಿಸಿರುವುದು ಗೊತ್ತಾಗಿದೆ. ಅದೇ ಕಾರಣಕ್ಕೆ ಇದೀಗ ದೂರು ದಾಖಲು ಮಾಡಲಾಗಿದ್ದು, ತನಿಖೆ ಮುಂದುವರೆದಿದೆ.