Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಅಶ್ಲೀಲ ಸಿಡಿ ಅಪ್ಲೋಡ್…!

Spread the love

ಹುಬ್ಬಳ್ಳಿ: ರಾಜ್ಯದಲ್ಲಿ ಸಿಡಿಗಳ ಹಾವಳಿ ಹೆಚ್ಚಾಗುತ್ತಿದ್ದ ಸಮಯದಲ್ಲೇ ಅಶ್ಲೀಲ ವೀಡಿಯೋವನ್ನ ಇನ್ಸ್ಟಾಗ್ರಾಂನಲ್ಲಿ ಕಳುಹಿಸಿದ ಆರೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ವ್ಯಕ್ತಿಯ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೇಹುಬ್ಬಳ್ಳಿಯ ಮುಜಾಮಿಲ್ ನವಲೂರ ಎಂಬುವವರ ವಿರುದ್ಧ ದೂರು ದಾಖಲಾಗಿದೆ. ಮುಜಾಮಿಲ್ ನವಲೂರ ತಾನು ಹೊಂದಿರುವ ರಾಕ್ ವೈ-02 ಎನ್ನುವ ಇನ್ಸ್ಟಾಗ್ರಾಂ ಯೂಸರ್ ನೇಮ್ ದಿಂದ 2020 ಮೇ 2ರಂದು ಅಪ್ರಾಪ್ತರಾದ ಹುಡುಗ-ಹುಡುಗಿಯ ಶಾಲಾ ಕೊಠಡಿಯಲ್ಲಿನ 30 ಸೆಕೆಂಡಿನ ಅಶ್ಲೀಲ ದೃಶ್ಯಾವಳಿಗಳನ್ನ ಕಳುಹಿಸಿದ್ದನು.

ಸಿಐಡಿ ಘಟಕದಿಂದ ಧಾರವಾಡ ಸಿಇಎನ್ ಠಾಣೆಗೆ ಬಂದ ದೂರನ್ನ ಪರಿಗಣಿಸಿ, ಹುಬ್ಬಳ್ಳಿ-ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು, ಆರೋಪಿತ ವ್ಯಕ್ತಿಗಾಗಿ ಹುಡುಕಾಟ ಆರಂಭಿಸಿದ್ದಾರೆ.


Spread the love

Leave a Reply

Your email address will not be published. Required fields are marked *