ಕಸ್ಟಡಿಯಲ್ಲಿದ್ದ ‘ರಿಕಾಮಿ ಬೆಂಕಿ’ ಪರಾರಿ: ‘ಅದ್ಕ್’ ಹೋದಾಂವ್ ಬಂದೇ ಇಲ್ಲಾ..
ಹುಬ್ಬಳ್ಳಿ: ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪ್ರಕರಣದಲ್ಲಿ ಆರೋಪಿಯಾಗಿದ್ದವ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾದ ಘಟನೆ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಆರೋಪಿಯಾಗಿದ್ದ ನಂದೀಶ ಅಲಿಯಾಸ್ ಬೆಂಕಿ ಉಮೇಶ ಸಕ್ರಪ್ಪನವರ ಎಂಬಾತನೇ ತಪ್ಪಿಸಿಕೊಂಡಿದ್ದಾನೆಂದು ಪೊಲೀಸ್ ಕಾನ್ಸಸ್ಟೇಬಲ್ ರಾಮನಗೌಡ ಬಿರಾದಾರ ಅಶೋನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಹುಬ್ಬಳ್ಳಿ ಇಂದ್ರಪ್ರಸ್ಥನಗರದ 2ನೇ ಕ್ರಾಸ್ ಬಳಿ ಮೂತ್ರ ವಿಸರ್ಜನೆ ಮಾಡಿ ಬರುವುದಾಗಿ ಹೇಳಿ ಹೋದ ಆರೋಪಿ ಅಲ್ಲಿಂದಲೇ ಪರಾರಿಯಾಗಿದ್ದಾನೆ. ಈ ಸಂಬಂದ ದೂರು, ನೀಡಿರುವ ಪೊಲೀಸ್, ಆರೋಪಿಯ ವಿವರವಾದ ಮಾಹಿತಿಯನ್ನ ನೀಡಿದ್ದಾರೆ.
ಪೊಲೀಸರಿಂದಲೇ ತಪ್ಪಿಸಿಕೊಂಡು ಹೋದ ಆರೋಪಿಯನ್ನ ಮತ್ತೆ ಪೊಲೀಸರೇ ಹುಡುಕುವ ಜವಾಬ್ದಾರಿ ಇದೀಗ ಅಶೋಕನಗರ ಠಾಣೆ ಸಿಬ್ಬಂದಿಗಳ ಮೇಲೆ ಬಿದ್ದಿದೆ. ಅಂದ ಹಾಗೇ ಪೊಲೀಸ್ ಪ್ರಕರಣದಲ್ಲಿ ತಪ್ಪಿಸಿಕೊಂಡವನ ಉದ್ಯೋಗ ರಿಕಾಮಿ ಎಂದು ನಮೂದು ಮಾಡಲಾಗಿದೆ.

