ಕಲಘಟಗಿ ತಾಲೂಕಿನ ರಾಮನಾಳದಲ್ಲಿ ಯುವಕನ ದುರ್ಮರಣ…!

ಕಲಘಟಗಿ: ತಾಲೂಕಿನ ರಾಮನಾಳ ಗ್ರಾಮದ ಹೊರವಲಯದಲ್ಲಿ ತಡರಾತ್ರಿ ಅತಿಯಾದ ಮಳೆಯಾದ ಹಿನ್ನೆಲೆಯಲ್ಲಿ ಹೊಲಕ್ಕೆ ಹೋಗಿದ್ದ ಯುವಕನೋರ್ವನಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ನಡೆದಿದೆ.

23 ವರ್ಷದ ಮಂಜುನಾಥ ಸಾಲಿಮಠ ಎಂಬ ಯುವಕನೇ ವಿದ್ಯುತ್ ತಗುಲಿ ದುರ್ಮರಣಕ್ಕೀಡಾಗಿದ್ದಾನೆ. ರಾತ್ರಿ ಮಳೆಯಾಗಿದ್ದರಿಂದ ಹತ್ತಿ ಹೊಲಕ್ಕೆ ಹೋಗಿದ್ದ ಯುವಕ, ತಂತಿಯನ್ನ ದಾಟುವಾಗ ವಿದ್ಯುತ್ ತಗುಲಿದೆ.
ಜಮೀನಿನ ಸುತ್ತಮುತ್ತ ಯಾರೂ ಹೋಗಬಾರದೆಂಬ ಕಾರಣಕ್ಕೆ ತಾವೇ ಹಾಕಿದ್ದ ತಂತಿಯೂ, ಯುವಕನ ಸಾವಿಗೆ ಕಾರಣವಾಗಿದೆ. ಘಟನೆಯ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳೀಯರು ಸ್ಥಳಕ್ಕೆ ಹೋಗಿ ನೋಡಿದರಾದರೂ, ಯುವಕ ಅಲ್ಲಿಯೇ ಸಾವಿಗೀಡಾಗಿದ್ದ.
ಪ್ರಕರಣ ದಾಖಲು ಮಾಡಿಕೊಂಡಿರುವ ಕಲಘಟಗಿ ಠಾಣೆಯ ಪೊಲೀಸರು, ಶವವನ್ನ ಕಲಘಟಗಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.