Posts Slider

Karnataka Voice

Latest Kannada News

ಗುಡಿಹಾಳದಲ್ಲಿ “ಶಾಕ್” ಬಡಿಗೇರ ಕಲ್ಲಪ್ಪ ಇನ್ನಿಲ್ಲ…!

1 min read
Spread the love

ಕಲಘಟಗಿ: ತಾಲೂಕಿನ ಗುಡಿಹಾಳ ಗ್ರಾಮದಲ್ಲಿ ವ್ಯಕ್ತಿಯೋರ್ವ ತನ್ನದೇ ಮನೆಯ ಸ್ವಿಚ್ ಬೋರ್ಡನ್ನ ರಿಪೇರಿ ಮಾಡಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ನಡೆದಿದೆ.

kalappa badiger

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗುಡಿಹಾಳದ 43 ವರ್ಷದ ಕಲ್ಲಪ್ಪ ಬಡಿಗೇರ ಎಂಬಾತನೇ ಮನೆಯಲ್ಲಿ ವಿದ್ಯುತ್ತ ಶಾಕ್ ನಿಂದ  ತೀವ್ರವಾಗಿ ಅಸ್ವಸ್ಥಗೊಂಡಿದ್ದ. ಕೂಡಲೇ ಈತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯಿತಾದರು, ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾನೆ.

ತನಗೆ ವಿದ್ಯುತ್ ಬಗ್ಗೆ ಯಾವುದೇ ಮಾಹಿತಿ ಇಲ್ಲದೇ ಹೋದರೂ, ರಿಪೇರಿಗೆ ಮುಂದಾಗಿದ್ದ ಕಲ್ಲಪ್ಪ, ಸ್ವಿಚ್ ಆಪ್ ಮಾಡಿದರೇ, ವಿದ್ಯುತ್ ಬರುವುದಿಲ್ಲವೆಂದುಕೊಂಡು ಬೋರ್ಡಿನಲ್ಲಿನ ಸ್ವಿಚ್ ಆಫ್ ಮಾಡಿ, ರಿಪೇರಿಗೆ ಮುಂದಾದಾಗ ದುರ್ಘಟನೆ ಸಂಭವಿಸಿದೆ.

ಕಲ್ಲಪನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಶವಾಗಾರದಲ್ಲಿ ಇರಿಸಲಾಗಿದ್ದು, ಕಲಘಟಗಿ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *

You may have missed