ಧಾರವಾಡದಲ್ಲಿ ಕತ್ತಲು- ಬೆಳಕಿಗಾಗಿ ಹುಡುಕಾಟ….!
1 min readಧಾರವಾಡ: ಶಹರ ನಾರಾಯಣಪೂರ ಪ್ರದೇಶದಲ್ಲಿ ಮರದ ಟೊಂಗೆಯೊಂದು ಬಿದ್ದ ಪರಿಣಾಮ ಎಂಟು ವಿದ್ಯುತ್ ಕಂಬಗಳು ಕೆಳಗೆ ಉರುಳಿದ ಘಟನೆ ನಡೆದಿದ್ದು, ಬಹುತೇಕ ಅರ್ಧ ಧಾರವಾಡವೇ, ಕತ್ತಲಲ್ಲಿ ಬೆಳಕಿಗಾಗಿ ಹುಡುಕಾಟ ನಡೆಸುವಂತಾಗಿದೆ.
ನಾರಾಯಣಪುರದ ಪ್ರಮುಖ ಪ್ರದೇಶದಲ್ಲಿನ ದೊಡ್ಡದೊಂದು ಮರದ ಟೊಂಗೆ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ಅದರ ಭಾರ ತಾಳದೇ ಒಂದು ಕಂಬ ಬಿದ್ದು, ಅದಕ್ಕೆ ಕನೆಕ್ಟ್ ಆಗಿದ್ದ ಎಂಟು ಕಂಬಗಳು ನೆಲಕ್ಕುರಳಿವೆ.
ನಾರಾಯಣಪೂರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕತ್ತಲು ಆವರಿಸಿದ್ದು, ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಹೋಗಿ ಬಿದ್ದಿರುವ ಮರದ ಟೊಂಗೆ ಹಾಗೂ ವಿದ್ಯುತ್ ತಂತಿಗಳು, ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.
ಸಂಚಾರಿ ಠಾಣೆಯ ಎಎಎಸ್ಐ ನಾಗನೂರ, ಲಕ್ಷ್ಮಣ ಲಮಾಣಿ, ನಿಂಗರಾಜ ನಾಯಕ ಸೇರಿಕೊಂಡು ಸಾರ್ವಜನಿಕರು ಹಾಗೂ ವಾಹನ ಸವಾರರು ಬರದಂತೆ ತಡೆಯುತ್ತಿದ್ದಾರೆ. ಒಂದೇ ಸಮಯದಲ್ಲಿ ಎಂಟು ವಿದ್ಯುತ್ ಕಂಬಗಳು ಉರುಳಿರುವುದರಿಂದ ವಿದ್ಯುತ್ ಇಂದು ರಾತ್ರಿ ಅರ್ಧ ಧಾರವಾಡಕ್ಕೆ ಬರುವುದು ಡೌಟು ಎನ್ನಲಾಗುತ್ತಿದೆ.