ಕಲಘಟಗಿ ಮುತ್ತಗಿಯ ಕ್ರಷರನಲ್ಲಿ ಸ್ಪೋಟಕಗಳು ಪತ್ತೆ..!
1 min readಧಾರವಾಡ: ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಭಾರೀ ಸ್ಪೋಟದ ಹಿನ್ನಲೆಯಲ್ಲಿ ಜಿಲ್ಲೆಯ ಕಲಘಟಗಿ ತಾಲೂಕಿನ ಕ್ರಷರವೊಂದರ ಮೇಲೆ ದಾಳಿ ಮಾಡಿರುವ ರಾಜ್ಯ ಆಂತರಿಕಾ ಭದ್ರತಾ ದಳ ಭಾರಿ ಪ್ರಮಾಣದ ಜಿಲೆಟಿನ ಹಾಗೂ ಸ್ಪೋಟಕಗಳು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ಠಾಣಾ ವ್ಯಾಪ್ತಿಯಲ್ಲಿ ಅಂತರಿಕ ಭದ್ರತಾ ದಳ ಕ್ರಷರ್ ಮೇಲೆ ದಾಳಿ ಮಾಡಿ ಸ್ಪೋಟಕಗಳನ್ನ ಐಎಸ್ ಡಿ ವಶಪಡಿಸಿಕೊಂಡಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುತ್ತಗಿ ಗ್ರಾಮದ ಶಿವಚಂದ್ರನ ಸ್ಟೋನ್ ಕ್ರಷರ್ ಮೇಲೆ ದಾಳಿ ಮಾಡಲಾಗಿದ್ದು, ದಾಳಿ ವೇಳೆ ಆಕ್ರಮವಾಗಿ ಸಂಗ್ರಹಿಸಿದ್ದ 234 ಜಿಲೆಟಿನ್ ಕಡ್ಡಿ, 67 ಎಲೆಕ್ಟ್ರಿಕ್ ಡಿವೈಸ್ ಹಾಗೂ ಮಗ್ಗರ್ ಬಾಕ್ಸ್ ವಶಕ್ಕೆ ಪಡೆಯಲಾಗಿದೆ.
ಧಾರವಾಡದಲ್ಲಿರುವ ಶಿವಕುಮಾರ ವೀರನಗೌಡ ಪಾಟೀಲ ಎಂಬುವವರ ದೂರಿನ ಮೇಲೆ ಕ್ರಷರ್ ಮೇಲೆ ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಲಿದ್ದು, ಆಂತರಿಕಾ ಭದ್ರತಾ ದಳದ ಬೆಳಗಾಂ ಧಾರವಾಡ ವಿಭಾಗದ ಅಧಿಕಾರಿಗಳಿಂದ ದಾಳಿ ನಡೆದಿದೆ.