ಅಳ್ನಾವರದಲ್ಲಿ ಜೇನು ತುಪ್ಪವೆಂದು ವಿಷ ಕುಡಿದ ಯೋಧ ಇನ್ನಿಲ್ಲ..!

ಧಾರವಾಡ: ರಜೆಗೆಂದು ಊರಿಗೆ ಬಂದು ಬೆಳ್ಳಂಬೆಳಿಗ್ಗೆ ಜಾಗಿಂಗ್ ಮಾಡಲು ಹೋಗಿದ್ದ ಯೋಧನೋರ್ವ ಹೊಲದಲ್ಲಿ ಜೇನು ತುಪ್ಪವೆಂದು ವಿಷಸೇವಿಸಿ ಪ್ರಾಣವನ್ನೇ ಕಳೆದುಕೊಂಡ ದುರ್ಘಟನೆ ಅಳ್ನಾವರದ ಬಳಿ ಸಂಭವಿಸಿದೆ.

ಮೂಲತಃ ಖಾನಾಪೂರ ತಾಲೂಕಿನ ಲಿಂಗನಮಠ ಗ್ರಾಮದ ನಾಗರಾಜ ಸುಭಾಸ ಮಿಟಗಾರ, ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದಲ್ಲಿ ವಾಸಿಸುತ್ತಿದ್ದರು. ರಜೆಗೆಂದು ಗ್ರಾಮಕ್ಕೆ ಬಂದು ಎರಡು ದಿನದ ನಂತರ ರನ್ನಿಂಗಗೆ ಹೋಗಿದ್ದ ನಾಗರಾಜ್, ತಮ್ಮದೇ ಜಮೀನಿನ ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿದ್ದಾರೆ.
ತಾನೂ ಕುಡಿದದ್ದು ಜೇನು ತುಪ್ಪವಲ್ಲ, ವಿಷ ಎಂದು ಗೊತ್ತಾದ ತಕ್ಷಣವೇ ಅಲ್ಲಿದ್ದವರಿಗೆ ವಿಷಯವನ್ನ ತಿಳಿಸಿದ್ದಾರೆ. ತಕ್ಷಣವೆ ನಾಗರಾಜರ ಸಂಬಂಧಿಕರು ಹೊಲಕ್ಕೆ ವೈಧ್ಯರನ್ನ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿ, ಅಲ್ಲಿಂದ ಧಾರವಾಡ ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯೂ ಬೇಡವೆನಿಸಿ, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಆದರೆ, ವಿಷ ವೇಗವಾಗಿ ದೇಹದಲ್ಲಿ ಹರಡಿದ್ದರಿಂದ ಯೋಧನ ಕಿಡ್ನಿ ಫೇಲ್ ಆಗಿದೆ. ಇದರಿಂದ ಯೋಧ ನಾಗರಾಜ ಸಾವಿಗೀಡಾಗಿದ್ದಾರೆ. ಇವರ ಸಹೋದರ ಕೂಡಾ ಆರ್ಮಿಯಲ್ಲಿ ದೇಶ ಸೇವೆ ಮಾಡುತ್ತಿದ್ದಾರೆ. ನಾಗರಾಜ ಮಿಟಗಾರ 26 ವರ್ಷದವರಾಗಿದ್ದು, ಸಿಆರ್ ಪಿಎಫ್ ನ 188 ಬೆಟಾಲಿಯನ್ ಯೋಧರಾಗಿದ್ದರು. ಪ್ರಕರಣವನ್ನ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮವನ್ನ ಅಳ್ನಾವರ ಠಾಣೆ ಪೊಲೀಸರು ತೆಗೆದುಕೊಂಡಿದ್ದಾರೆ.