ಸಿಆರ್ ಪಿಗಳ ಮಾತು ಕೇಳಿ ಜೀವ ಕಳೆದುಕೊಳ್ಳಬೇಡಿ: ವಠಾರ ಶಾಲೆಗೆ ಹೋಗಬೇಡಿ.. ಅಂದವರಾರು ಗೊತ್ತಾ..?

ಯಾವುದೇ ಮುಂಜಾಗ್ರತೆ ಇಲ್ಲದ ವಠಾರ ಶಾಲೆಗಳಿಂದ ಮಕ್ಕಳಿಗೆ ಕೊರೋನಾ ಬಂದರೇ ಗತಿ ಏನು..
ರಾಯಚೂರು: ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಯಾವುದೇ ಕಾರಣಕ್ಕೂ ವಠಾರ ಶಾಲೆಗಳನ್ನ ನಡೆಸಲು ಹೋಗಬೇಡಿ. ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಎಚ್ಚರಿಸಿದೆ.
ಸರಕಾರದ ಆದೇಶದ ಪ್ರಕಾರ ಆಗಸ್ಟ್ 3ರ ವರೆಗೆ ಶಾಲಾ-ಕಾಲೇಜುಗಳನ್ನ ಆರಂಭಿಸದಿರಲು ನಿರ್ಧರಿಸಲಾಗಿದೆ. ಆದರೆ, ಲಿಂಗಸುಗೂರ ತಾಲೂಕಿನಲ್ಲಿ ಸಿಆರ್ ಪಿಗಳು ಶಿಕ್ಷಕರ ಮೇಲೆ ಒತ್ತಡ ಹಾಕಿ ವಠಾರ ಶಾಲೆಗಳನ್ನ ನಡೆಸುವಂತೆ ಒತ್ತಡ ಹಾಕುತ್ತಿದ್ದಾರೆ. ಇದನ್ನ ಕೈ ಬಿಡಬೇಕು.
ಈಗಾಗಲೇ ಲಿಂಗಸುಗೂರ ತಾಲೂಕಿನಲ್ಲಿ ಇಬ್ಬರು ಶಿಕ್ಷಕರು ಕೊರೋನಾಗೆ ಬಲಿಯಾಗಿದ್ದಾರೆ. ವಠಾರ ಶಾಲೆ ನಡೆಸುವ ಬಗ್ಗೆ ಡಿಡಿಪಿಐಯವರನ್ನ ಕೇಳಿದರೇ ನಾವೂ ಆದೇಶವನ್ನೇ ಮಾಡಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಶಿಕ್ಷಕರು ತಮ್ಮ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಸರಕಾರದ ಆದೇಶದ ಪ್ರಕಾರ ಆಗಸ್ಟ್ 31ರ ವರೆಗೆ ಇದನ್ನ ನಿಲ್ಲಿಸುವಂತೆ ಸಂಘದ ಅಧ್ಯಕ್ಷ ಭೀಮಪ್ಪ ನಾಯಕ ಆಗ್ರಹಿಸಿದ್ದಾರೆ.