ರಾಜ್ಯದ ಮಾದರಿ ಸಿಆರ್ ಪಿ: ಸರಕಾರಿ ಶಾಲೆ ಉಳಿವಿಗಾಗಿ ನಡೆದಿದೆ ದಿನಂಪ್ರತಿ ಹೋರಾಟ

ಇಂಥವರಿಗೆ ಕಾಲ್ ಮಾಡಿ ಕಂಗ್ರಾಟ್ಸ್ ಮಾಡಿ- 9743499264
ಗದಗ: ಕೊರೋನಾ ಸಮಯದಲ್ಲಿ ಶಿಕ್ಷಣ ಪಡೆಯುವುದು ಮತ್ತು ಕೊಡುವುದು ದುಸ್ತರವಾಗಿರುವ ಸಮಯದಲ್ಲಿ ಓರ್ವ ಸಿಆರ್ ಪಿ ತನ್ನ ತಾಲೂಕಿನ ಸರಕಾರಿ ಶಾಲೆಗಳ ಉಳಿವಿಗಾಗಿ ಹಗಲಿರುಳು ಶ್ರಮಿಸುತ್ತಿರುವುದು ಎಲೆ ಮರೆಕಾಯಿಯಂತೆ. ಪ್ರತಿದಿನವೂ ಅವರ ದಿನಚರಿ ಹೇಗಿದೆ.. ಸರಕಾರಿ ಶಾಲೆಗಾಗಿ ಮಕ್ಕಳನ್ನ ಸೆಳೆಯುವ ಯತ್ನ ಹೇಗಿದೆ ಎಂಬುದನ್ನ ತಿಳಿಯಲು ಈ ಮಾಹಿತಿಯನ್ನ ಸಂಪೂರ್ಣ ಓದಿ..
ಶಿಕ್ಷಣ ಇಲಾಖೆಯಲ್ಲಿ ಸಿಆರ್ ಪಿ ಅಂದ್ರೇ ಸಮೂಹ ಸಂಪನ್ಮೂಲ ವ್ಯಕ್ತಿ ಎಂದು ಕರೆಯಲ್ಪಡುತ್ತದೆ. ಆಯಾ ತಾಲೂಕಿನ ಕೆಲವು ಭಾಗಕ್ಕೆ ಇವರೇ ಇನ್ ಜಾರ್ಜ ಇರುತ್ತಾರೆ. ಬಹುತೇಕ ಶಾಲೆಗಳ ಆಗುಹೋಗುಗಳನ್ನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸುತ್ತ ಶಿಕ್ಷಣದ ಅಭಿವೃದ್ಧಿಗೆ ನಡೆದುಕೊಳ್ಳುವುದು ಇವರ ಕರ್ತವ್ಯ. ಆದರೆ, ನಾವು ಹೇಳಲು ಹೊರಟಿರುವುದು ಸರಕಾರದ ಕೆಲಸ ದೇವರ ಕೆಲಸ ಎಂದು ನಂಬಿರುವ ಸಿಆರ್ ಪಿ ಒಬ್ಬರ ಬಗ್ಗೆ.
ಕೊರೋನಾ ವೈರಸ್ ಶಿಕ್ಷಣ ಇಲಾಖೆಗೂ ಮಹಾಮಾರಿಯಂತೆ ಆವರಿಸಿದ್ದು ತಮಗೆ ಗೊತ್ತೆಯಿದೆ. ಇದೇ ಕಾರಣಕ್ಕೆ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಕೂಡಾ ಆಗುತ್ತಿಲ್ಲ. ಹೀಗಾದ್ರೇ ಸರಕಾರಿ ಶಾಲೆಗಳೂ ಉಳಿಯಬೇಕಾ ಅಥವಾ ಬೇಡವೋ ಎಂಬ ಜಿಜ್ಞಾಸೆಯಲ್ಲಿ ತೊಡಗಿರುವಾಗಲೇ ಈ “ಸಿಆರ್ ಪಿ” ಮಾದರಿಯಾಗಿ ನಿಲ್ಲುತ್ತಿದ್ದಾರೆ. ಇವರ ಪ್ರಯತ್ನ ತಾಲೂಕಿನಲ್ಲಿ ಹೊಸತನವನ್ನೇ ಮೂಡಿಸಿದೆ.
ಅಂದ ಹಾಗೇ ಈ ಮಾದರಿ ಸಮೂಹ ಸಂಪನ್ಮೂಲ ವ್ಯಕ್ತಿ ಇರುವುದು ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ. ಹೆಸರು ಅನ್ವರ ವಣಗೇರಿ ಎಂದು. ತಾಲೂಕಿನ ಬರೋಬ್ಬರಿ 23 ಸರಕಾರಿ ಉರ್ದು ಶಾಲೆಗಳ ಉಳಿವಿಗಾಗಿ ಅವಿರತ ಪ್ರಯತ್ನ ಆರಂಭಿಸಿದ್ದಾರೆ. ಕೊರೋನಾ ಸಮಯದಲ್ಲೂ ಗ್ರಾಮ, ಪಟ್ಟಣದ ಶಿಕ್ಷಕರು, ಎಸ್ ಡಿಎಂಸಿ ತಂಡವನ್ನೂ ಮತ್ತು ಆಯಾ ಪ್ರದೇಶದ ಪ್ರಮುಖರನ್ನ ಕರೆದುಕೊಂಡು ಮನೆ ಮನೆಗೆ ಹೋಗಿ ಮಕ್ಕಳನ್ನ ಶಾಲೆಗೆ ಕಳಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಸರಕಾರದ ಆದೇಶವಿಲ್ಲದಿದ್ದರೂ ಸರಕಾರಿ ಶಾಲೆಗಳ ಉಳಿವಿಗಾಗಿ ಪ್ರತಿದಿನವೂ ಒಂದೊಂದು ಊರಿಗೆ, ಪ್ರದೇಶಕ್ಕೆ ಭೇಟಿ ನೀಡಿ ಪ್ರಯತ್ನ ಮುಂದುವರೆದ ಪರಿಣಾಮ ಇವತ್ತು ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರುತ್ತಿದೆ. ಯಾವುದೇ ಫಲಾಪೇಕ್ಷೆಯಿಲ್ಲದೇ ನಡೆಯುವ ಇಂತವರನ್ನ ಸರಕಾರ ಗುರುತಿಸಿಬೇಕಿದೆ. ಸರಕಾರಿ ಶಾಲೆಯ ಋಣ ತೀರಿಸುವ ಇಂಥವರಿಗೆ ಸರಕಾರವೂ ಗೌರವಿಸಬೇಕಿದೆಯಲ್ಲವೇ… ಗುಡ್ ವರ್ಕ್ ಅನ್ವರ ಸರ್.. ನಿಮಗೆ ಒಳ್ಳೆಯದಾಗಲಿ.. ನಿಮ್ಮಂತವರಿಂದಲೇ ಸರಕಾರಿ ಶಾಲೆಗಳ ಕೀರ್ತಿ ಹೆಚ್ಚಲಿ..