ಬೆಳೆವಿಮೆ “ಪರಿಹಾರ 50-50” ಯಾವ್ಯಾವ ಹಳ್ಳಿಯಲ್ಲಿ ಯಾರ‌್ಯಾರು ಏಜೆಂಟರು: ಶ್ರೀಮಂತ ರೈತರ ಮಸಲತ್ತು…!!!
ಧಾರವಾಡ: ರೈತರು ದೇಶದ ಬೆನ್ನೆಲಬು ಎನ್ನುವುದನ್ನೇ ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ಕೆಲ ನೀಚ ಶ್ರೀಮಂತ ರೈತರು, ಕೋಟಿ ಕೋಟಿ ಲೂಟಿಯನ್ನ ಬೆಳೆವಿಮೆಯಲ್ಲಿ ಹೊಡೆಯುತ್ತಿರುವುದು ರಹಸ್ಯವಾಗಿ ಉಳಿದಿಲ್ಲ ಎಂಬುದು ಕರ್ನಾಟಕವಾಯ್ಸ್.ಕಾಂ ಮೂಲಕ ಗೊತ್ತಾಗುತ್ತಿದೆ.
ಧಾರವಾಡ ಗ್ರಾಮೀಣದಿಂದ ಹಿಡಿದು ಆರಂಭವಾಗುವ ಈ ಶ್ರೀಮಂತ ರೈತ ಏಜೆಂಟರು ಹುಬ್ಬಳ್ಳಿ ತಾಲೂಕಿನಲ್ಲಿ ಹೆಚ್ಚಾಗಿದ್ದಾರೆ. ಕುಂದಗೋಳ, ಶಿರಹಟ್ಟಿ, ಗದಗ ಗ್ರಾಮೀಣದ ಜೊತೆಗೆ ಹಾವೇರಿಯ ಜಿಲ್ಲೆಯ ಶಿಗ್ಗಾಂವ ಮೂಲ ಮಾಡಿಕೊಂಡಿದ್ದಾರೆ. ಅವರವರ ಗ್ರಾಮದಲ್ಲಿ ಅವರೇ, ಬೇರೆ ರೈತರ ಹೆಸರಿನಲ್ಲಿ ಬೆಳೆವಿಮೆ ತುಂಬಿ ಹಣಕ್ಕಾಗಿ ‘ಬಕ’ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಈ ಶ್ರೀಮಂತ ಏಜೆಂಟರು ಮತ್ತು ಅವರು ಯಾರ ಯಾರ ಹೆಸರಿನಲ್ಲಿ ಹಣ ತುಂಬಿರುವುದರ ಲಿಸ್ಟ್ ‘ಕೆವಿ’ಗೆ ಲಭಿಸಿದೆ. ಹುಬ್ಬಳ್ಳಿ ತಾಲೂಕಿನ ಲಿಂಕ್ ಪಾಣಿಗಟ್ಟಿವರೆಗೆ ಇದ್ದರೇ, ಪಾಣಿಗಟ್ಟಿಯ ಲಿಂಕ್ ಗದಗ ತಾಲೂಕಿನ ಮೂಲ ಹಳ್ಳಿಯಲ್ಲಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಾಗತೊಡಗಿದೆ.
ರೈತರ ಖಾತೆ ಮೂಲಕ ಮುಂಗಾರಿನ ಹೆಸರು ಬೆಳೆವಿಮೆ ತುಂಬಿರುವ ಖದೀಮರು ಈ ತಿಂಗಳ ಬದಲಿಗೆ ಜನೇವರಿ ಕೊನೆಯ ವಾರ ಅಥವಾ ಫೆಬ್ರುವರಿಯಲ್ಲಿ ಬಂದೇ ಬರತ್ತೆ ಎಂದು ಜಪಿಸತೊಡಗಿದ್ದಾರೆ. ಹೆಸರು ಬೆಳೆ ಪರಿಶೀಲನೆಗೆ ಬಂದಾಗ ರಾತ್ರೋರಾತ್ರಿ ಹೆಸರು ಬಿಡಿಸಿ, ಪರಿಶೀಲನೆ ಮಾಡಲು ತಂಡ ಬಂದಾಗ ಎರಡ್ಮೂರು ಹೆಸರು ಕಾಯಿ ಇರುವಂತೆ ಮಾಡಿದ ಶ್ರೀಮಂತ ರೈತರ ಪಟ್ಟಿಯೂ ಕರ್ನಾಟಕವಾಯ್ಸ್.ಕಾಂಗೆ ಲಭಿಸಿದೆ.
ಕುಂದಗೋಳ ತಾಲೂಕಿನಲ್ಲಿ ಎಲ್ಲಿ ತಮ್ಮ ಬಂಡವಾಳ ಹೊರಬರತ್ತೋ ಅಂದುಕೊಂಡು ಕಂಪನಿಯ ಓರ್ವನನ್ನ ಥಳಿಸಿ, ಆತನ ವಿರುದ್ಧ ರೇಪ್ ಕೇಸ್ ಹಾಕಿಸುವ ತಂತ್ರ ರೂಪಿಸಿದ್ದು, ಸಂಬಂಧಿಸಿದ ಇಲಾಖೆಯ ಸ್ಮರಣೆಯಲ್ಲಿದೆ.
ಅನ್ಯಾಯಕ್ಕೆ ಒಳಗಾದ ರೈತರಿಗೆ ನ್ಯಾಯ ಸಿಗುವವರೆಗೆ ಕರ್ನಾಟಕವಾಯ್ಸ್.ಕಾಂ ಈ ಕುರಿತು ನಿಖರವಾದ ಮಾಹಿತಿಯನ್ನು ನಿರಂತರವಾಗಿ ಹೊರ ಹಾಕುತ್ತಲೇ ಇರುತ್ತದೆ.