ಬೆಳೆ ವಿಮೆ “ಪರಿಹಾರ 50-50” ಕಿರೇಸೂರಲ್ಲಿ ನಡೆದ ಡ್ರಾಮಾ ಬಟಾಬಯಲು… “ಹಿನ್ನೆಲೆ” ಯಾರು ಗೊತ್ತಾ…!?

ಧಾರವಾಡ: ಸಾವಿರಾರೂ ರೈತರಿಗೆ ಮೋಸ ಮಾಡಿ, ಕೆಲ ರೈತರಿಗೆ ಬೆಳೆ ವಿಮೆ ಪರಿಹಾರ ನೀಡಿದ್ದೇವೆ ಎಂದು ತೋರಿಸಿಕೊಳ್ಳುವ ಷಢ್ಯಂತ್ರವೊಂದು ಸದ್ದಿಲ್ಲದೇ ನಡೆಯುತ್ತಿದ್ದು, ಇದಕ್ಕೆ ವ್ಯವಸ್ಥಿತವಾಗಿ ‘ಬಲೆ’ ಹೆಣೆದು ಕೋಟಿ ಕೋಟಿ ಹಣ ಹೊಡೆಯಲು ಕಾದು ಕುಳಿತಿರುವ ಬಗ್ಗೆ ಕರ್ನಾಟಕವಾಯ್ಸ್.ಕಾಂಗೆ ಖಚಿತ ಮಾಹಿತಿ ದೊರಕಿದೆ.
ಮುಂಗಾರು ಬೆಳೆಯಲ್ಲಿ “ಹೆಸರು ಬೆಳೆ” ನಮೂದು ಮಾಡಿರುವುದು ಗೊತ್ತಾಗಿದೆ. ಇದನ್ನ ನೋಡಲು ಬರುವ ಇನ್ಸೂರೆನ್ಸ್ ಕಂಪನಿ ಅಧಿಕಾರಿಗಳಿಗೆ ಮೋಸ ಮಾಡುವ ಉದ್ದೇಶದಿಂದ ನಡೆದಿರುವ ವಂಚನೆಯ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.
ಕಿರೇಸೂರ ಗ್ರಾಮದ ಹೊಲವೊಂದನ್ನ ನೋಡಲು ಬರುವ ಮುನ್ನವೇ 25ಕ್ಕೂ ಹೆಚ್ಚು ಆಳುಗಳನ್ನ ಬಳಸಿ, ಹೆಸರು ಬಿಡಿಸಲಾಗಿದೆ. ಒಂದು ಗಿಡದಲ್ಲಿ ಎರಡ್ಮೂರು ಕಾಯಿಗಳನ್ನಷ್ಟೇ ಬಿಟ್ಟು ಇಳುವರಿ ಕಡಿಮೆ ತೋರಿಸಲಾಗಿದೆಯಂತೆ. ಈ ಸಮಯದಲ್ಲಿ ಹೊಲದ ಮಾಲೀಕನಿಗೆ 25ಸಾವಿರಕ್ಕೂ ಹೆಚ್ಚು ಹಣ ಕೊಟ್ಟಿರುವ ಬಗ್ಗೆ ಇಡೀ ಕಿರೇಸೂರದ ಗೋಡೆಗಳಲ್ಲಿ ರಿಂಗಣಿಸುತ್ತಿದೆ.
ಸೋಜಿಗವೆಂದರೇ, ಕೆಲವು ರೈತರು ವಂಚಕರ ಬಲೆಗೆ ಬಿದ್ದಿದ್ದು, ಸಾವಿರಾರೂ ರೈತರು ಇದರಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ. ರಾಜಕಾರಣಿಗಳು ಕೆಲವು ರೈತರಿಗೆ ಅನುಕೂಲವಾಗತ್ತೆ ಎಂದುಕೊಂಡು ಸುಮ್ಮನಾಗುವ ಬದಲು ನೂರೆಂಟು ರೈತಾಪಿ ಕುಟುಂಬಗಳಿಗೆ ಮೋಸವಾಗುತ್ತಿರುವ ಬಗ್ಗೆ ಗಮನ ಕೊಡಬೇಕಿದೆ.