Posts Slider

Karnataka Voice

Latest Kannada News

“ಬೆಳೆವಿಮೆ ಪರಿಹಾರ 50-50”- ಮಾಜಿ ಶಾಸಕರ ಬೆಂಬಲಿಗನೇ ಕಿಂಗ್‌ಪಿನ್… ಶ್ರೀಮಂತ ರೈತರ ಮೋಸದಾಟ…!!!

Spread the love

ಧಾರವಾಡ: ಅಖಂಡ ಧಾರವಾಡ ಜಿಲ್ಲೆಯಲ್ಲಿ ಸಾವಿರಾರೂ ಬಡ ರೈತರಿಗೆ ಮೋಸ ಮಾಡಿ ಕೆಲ ಶ್ರೀಮಂತ ರೈತರೊಂದಿಗೆ ಶಾಮೀಲಾಗಿ ಬೆಳೆವಿಮೆ ಪರಿಹಾರವನ್ನ ’50-50′ ಮಾಡುವುದರಲ್ಲಿ ಮಾಜಿ ಶಾಸಕನ ಬೆಂಬಲಿಗನೇ ಕಿಂಗ್‌ಪಿನ್ ಎಂಬುದು ಮಾಹಿತಿಯಿಂದ ಬಹಿರಂಗವಾಗತೊಡಗಿದೆ.

ಹೌದು… ಕರ್ನಾಟಕವಾಯ್ಸ್.ಕಾಂ ಬೆಳೆವಿಮೆ ಹಣದ ಬಗ್ಗೆ ನಡೆದಿರುವ ವಂಚನೆಯನ್ನ ಎಳೆಎಳೆಯಾಗಿ ಬಿಚ್ಚಿಡುತ್ತಿದ್ದ ಹಾಗೇ ಇದರ ಇಂದಿನ ರೂವಾರಿಯಾಗಿರುವ ಮಾಜಿ ಶಾಸಕನ ಬೆಂಬಲಿಗ ‘ದಾಡಿ’ ಕೆರೆದುಕೊಂಡು ಗದಗ ಸುತ್ತಮುತ್ತಲೂ ಅಲೆದಾಡುತ್ತಿರುವುದು ರಹಸ್ಯವಾಗಿ ಉಳಿದಿಲ್ಲ.

ಕೆಲ ಶ್ರೀಮಂತರು ಕೂಡಾ ಈತನೊಂದಿಗೆ ಹಣವನ್ನ ಹಾಕಿದ್ದು, ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಬಡ ರೈತರ ಶಾಪ ಇವರನ್ನ ಬಿಡಲ್ಲ ಎಂಬುದು ವಂಚಕರಿಗೆ ಅರ್ಥವಾಗಬೇಕಿದೆ. ಕೆಲ ಶ್ರೀಮಂತ ರೈತರು ತಾವೂ ಹಾಕಿರುವ ಹಣವಾದರೂ ಮರಳಿ ಬರಲಿ ಎಂದು ಹುಬ್ಬಳ್ಳಿ ತಾಲೂಕಿನ ದೇವರ ಮೊರೆ ಹೋಗಿದ್ದಾರೆ.

ಕಿಂಗ್‌ಪಿನ್ ವ್ಯಕ್ತಿಯ ವಯಕ್ತಿಕ ಜೀವನದಲ್ಲಿ ಈಗಾಗಲೇ ಬಿರುಗಾಳಿ ಎದ್ದಿದೆ. ಇರುವ ನೂರಾರು ಎಕರೆ ಜಮೀನು ಎರಡನೇಯ ಹೆಂಡತಿ ಹೊಡೆಯುವ ಉಮೇದಿಯಲ್ಲಿದ್ದಾಳೆ. ಪಾಪಿ ಪೀಡ ಪರದೇಶಿ ಪಾಲು ಎಂಬತಾಗಿದೆ.

ಬೆಳೆವಿಮೆ ಪರಿಹಾರವನ್ನ ರೈತರ ಅಕೌಂಟಿಗೆ ಬಂದ ತಕ್ಷಣವೇ ಹಣ ಪಡೆಯುವ ಹುನ್ನಾರದ ಪ್ರತಿಯೊಂದು ಮಾಹಿತಿಯನ್ನ ಅಖಂಡ ಧಾರವಾಡ ಜಿಲ್ಲೆಯ ಮೂವರು ಜಿಲ್ಲಾ ಉಸ್ತುವಾರಿ ಸಚಿವರು ಪಡೆದುಕೊಂಡಿರುವುದು ಖಾತ್ರಿಯಾಗಿದೆ.


Spread the love

Leave a Reply

Your email address will not be published. Required fields are marked *