ಬೆಳೆವಿಮೆ “ಪರಿಹಾರ-50-50”- ಗ್ರಾಪಂ ಸದಸ್ಯನ ಅಣ್ಣನಿಗೆ ಬಂದಿತ್ತು “ಆ” ಹಣ… ಪ್ರಭುವೇ ಏನು ನಿನ್ನ ಲೀಲೆ…!!!

ಧಾರವಾಡ: ಮುಂಗಾರು ಬೆಳೆವಿಮೆ ಪರಿಹಾರ ಹಣವನ್ನ ಪಡೆಯಲು ರಚಿಸಿರುವ ಮೋಸದ ಜಾಲ ಬಗೆದಷ್ಟು ಬಯಲಾಗತೊಡಗಿದ್ದು, ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದ ಗ್ರಾಪಂ ಸದಸ್ಯನ ಅಣ್ಣನಿಗೆ ಫೋನ್‌ಪೇ ಹಣ ಬಂದಿರುವುದು ಬೆಳಕಿಗೆ ಬಂದಿದೆ.
ಮುಂಗಾರು ಬೆಳೆ ಹಾಳಾಗಿದೆ ಎಂದು ತೋರಿಸಲು ರಾತ್ರೋರಾತ್ರಿ ಹೆಸರು ಬೆಳೆ ಬಿಡಿಸಿದ (ಎರಡ್ಮೂರು ಕಾಯಿ ಬಿಟ್ಟು) ರೈತನಿಗೆ ಹಣ ಕೊಡಲು ಫೋನ್ ಫೇ ಹಣವೂ, ಮೊದಲ ಬಾರಿಗೆ ಗ್ರಾಮ ಪಂಚಾಯತಿ ಸದಸ್ಯನಾಗಿರುವ ಮೋಸಗಾರನ ಸಹೋದರನಿಗೆ ಫೋನ್ ಫೇ ಮೂಲಕ ಬಂದಿದೆಯಂತೆ.
ಬೆಳೆವಿಮೆ ಪರಿಹಾರದ ಬಗ್ಗೆ ತಂಡ ವೀಕ್ಷಣೆಗೆ ಬರುವ ಮುನ್ನವೇ ಉತ್ತಮವಾಗಿ ಬಂದ ಫಸಲನ್ನ ರಾತ್ರೋರಾತ್ರಿ ಆಳುಗಳನ್ನ ಹೆಚ್ಚಿ ತೆಗೆಸಲಾಗಿತ್ತು. ಈ ಸಮಯದಲ್ಲಿ ಆಗಿರುವ ನಷ್ಟದ 25 ಸಾವಿರ ರೂಪಾಯಿ ಹಣ, ಯಾರಿಂದ ಫೋನ್ ಫೇ ಬಂದಿದೆ ಎಂಬುದನ್ನ ಪತ್ತೆ ಹಚ್ಚಲಾಗಿದೆಯಂತೆ.
ಕೆಲ ಶ್ರೀಮಂತ ರೈತರು ಕೂಡಿಕೊಂಡು ಬೆಳೆವಿಮೆಯ ಪರಿಹಾರದ ಹಣವನ್ನ 50-50 ಮೂಲಕ ಹಂಚಿಕೊಳ್ಳುವ ವಂಚಕ ಯೋಜನೆಯೊಂದನ್ನ ರೂಪಿಸಿರುವ ಕುರಿತು ಕರ್ನಾಟಕವಾಯ್ಸ್. ಕಾಂ ನಿರಂತರವಾಗಿ ಮಾಹಿತಿಯನ್ನ ಹೊರ ಹಾಕಲಾಗುತ್ತಿದೆ.
ಹುಬ್ಬಳ್ಳಿ ಗ್ರಾಮೀಣ ಭಾಗದ ಓರ್ವ ಬಿಎಎಂಎಸ್, ಎಂಡಿ ಮಾಡಿರುವ ವೈದ್ಯನೋರ್ವ ಜನಸೇವೆ ಮಾಡುವ ಬದಲು, ತನ್ನ ದವಾಖಾನೆಗೆ ಬೀಗ ಹಾಕಿ ಈ ಫಿಪ್ಟಿ-ಫಿಪ್ಟಿ ವಂಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಈತನ ಜೊತೆಗೆ ಜಿಪಂನ ಮಾಜಿ ಸದಸ್ಯನೋರ್ವನು ಸಾಥ್ ನೀಡಿರುವುದು ಬಯಲಾಗಲಿದೆ.