“ಬೆಳೆ ವಿಮೆ ಪರಿಹಾರ 50-50” ವಂಚನೆಯಲ್ಲಿ “VA” ಪ್ರಮುಖ ಪಾತ್ರ… ‘ಚಸ್ಮಾ, ಚಿನ್ನದ ಬ್ರಾಸ್‌ಲೈಟ್’…!!!

ಧಾರವಾಡ: ಕೆಲವೇ ಕೆಲವು ರೈತರಿಗೆ ಬೆಳೆ ವಿಮೆ ಪರಿಹಾರ ಸಿಗುವಂತೆ ಮಾಡಿ ಸಾವಿರಾರೂ ರೈತರಿಗೆ ಪಂಗನಾಮ ಹಾಕಿ, ಕೋಟಿ ಕೋಟಿ ಲೂಟಿ ಹೊಡೆಯುತ್ತಿರುವವರ ಬೆನ್ನಲಬಾಗಿ ಕೆಲಸ ಮಾಡುತ್ತಿರುವುದು “ಆಯ್ದ” ಗ್ರಾಮ ಸೇವಕರು (ವಿಎ) ಎಂಬುದು ರಹಸ್ಯವಾಗಿ ಉಳಿದಿಲ್ಲ.
ಕಳೆದ ಬಾರಿಯ ಬೆಳೆ ವಿಮೆ ಪರಿಹಾರ ಪಡೆಯಲು ಸಾವಿರಾರೂ ರೈತರು ಹರಸಾಹಸ ಪಟ್ಟರೂ, ಯಾವುದೇ ಪ್ರಯೋಜನವಾಗಿಲ್ಲ. ಆದರೆ, ಷಢ್ಯಂತ್ರ ರೂಪಿಸಿರುವ ವಂಚಕರ ತಂಡ, ಹೆಸರು ಬೆಳೆ ವಿಮೆ ಪರಿಹಾರಕ್ಕಾಗಿ ಬಕ ಪಕ್ಷಗಳಂತೆ ಕಾಯುತ್ತಿದ್ದಾರೆ.
ಈಗಾಗಲೇ, ಹೆಸರು ಬೆಳೆಗೆ ವಿಮೆ ಪರಿಹಾರ ಬಂದೇ ಬರತ್ತೆ ಎಂದುಕೊಂಡಿದ್ದು, ಇದನ್ನ ಬಿಡುಗಡೆ ಮಾಡಿಸಲು ಹರಸಾಹಸ ನಡೆಯುತ್ತಿದೆ. ಈಗಾಗಲೇ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆದು ರಾಜಧಾನಿಗೆ ಕಳಿಸಲಾಗಿದೆ.
ಈ ನಡುವೆ ವಂಚನೆಯ ಕೇಂದ್ರ ಬಿಂದು ಕೆಲ ವಿಎಗಳು ಎಂಬುದು ತನಿಖೆಯ ವೇಳೆಯಲ್ಲಿ ಗೊತ್ತಾಗಿದೆ. ಹುಬ್ಬಳ್ಳಿ ತಾಲೂಕಿನ ಕುಂದಗೋಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಓರ್ವ “ಸ್ಟೈಲಿಶ್” VA ಪ್ರಮುಖ ಪಾತ್ರಧಾರಿ ಎಂಬುದು ಗೊತ್ತಾಗಿದೆ.
ಯಾರದ್ದೋ ಹೊಲದಲ್ಲಿ ಯಾರನ್ನೋ ನಿಲ್ಲಿಸಿ ಪೋಟೊ ಅಪ್ಲೋಡ್ ಮಾಡಿರುವ ಅಂಶಗಳು ರಹಸ್ಯವಾಗಿ ಉಳಿದಿಲ್ಲ. ಈ ವಂಚನೆಯ ಸಂಪೂರ್ಣ ಮಾಹಿತಿಯನ್ನ ಕರ್ನಾಟಕವಾಯ್ಸ್.ಕಾಂ ಹೊರ ಹಾಕಿ, ಇನ್ನುಳಿದ ಸಾವಿರಾರೂ ರೈತರಿಗೆ ಅನುಕೂಲ ಮಾಡುವ ಉದ್ದೇಶ ಹೊಂದಿದೆ.