35ಸಾವಿರಕ್ಕೆ ಕೊಲೆಗೆ ಯತ್ನ: ಧಾರವಾಡದಲ್ಲಿ ನಡೆದದ್ದೇನು..?

ಧಾರವಾಡ: ಗೆಳೆಯನಿಗೆ ಸಾಲ ಕೊಟ್ಟು ಮರಳಿ ಪಡೆಯುವಾಗ ತಡ ಮಾಡಿದ್ದಕ್ಕೆ ತಲ್ವಾರನಿಂದ ಕೊಲೆ ಮಾಡುವ ಯತ್ನಕ್ಕೆ ಹೋದ ಘಟನೆ ಮೆಹಬೂಬನಗರದ ಮದುವೆ ಹಾಲ್ ಬಳಿ ಸಂಭಿವಿಸಿದೆ.
ಘಟನೆಯಲ್ಲಿ ಗಾಯಗೊಂಡವ ಮತ್ತು ಹಲ್ಲೆ ಮಾಡಿದವರಿಬ್ಬರು ಆಟೋ ಚಾಲಕರಾಗಿದ್ದು, ಧಾರವಾಡದ ಮಾಳಾಪುರ ನಿವಾಸಿ ಮಾಬೂಲಿ ತಾಸ್ತಿವಾಲೆ ಎಂಬಾತನೇ ಕೊಲೆ ಯತ್ನ ಮಾಡಿದ ಆರೋಪಿಯಾಗಿದ್ದು, ಪೊಲೀಸರ ಈತನನ್ನ ವಶಕ್ಕೆ ಪಡೆದಿದ್ದಾರೆ.
ಮಾರಣಾಂತಿಕವಾಗಿ ಹಲ್ಲೆಗೊಳಗಾಗಿರುವ ವ್ಯಕ್ತಿ ಮಾಬೂಲಿ ಹಿರೇಕುಂಬಿಯನ್ನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸಗೆ ರವಾನೆ ಮಾಡಲಾಗಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ತೀವ್ರವಾದ ರಕ್ತಸ್ರಾವವಾಗಿದೆ.
ತಾಸ್ತಿವಾಲೇಯಿಂದ 35 ಸಾವಿರ ರೂಪಾಯಿ ಹಣ ಪಡೆದಿದ್ದ ಹಿರೇಕುಂಬಿ, ಹಣವನ್ನ ಕೊಡಲು ಮೀನಮೇಷ ಎಣಿಸುತ್ತಿದ್ದ. ಇದರಿಂದ ರೋಸಿ ಹೋದ ತಾಸ್ತಿವಾಲೇ, ಮಚ್ಚಿನೊಂದಿಗೆ ಹಣ ಕೇಳು ಹೋಗಿದ್ದಾನೆ. ಆಗಲೂ ಮಾತಿನ ನಡುವೆ ಚಕಮಕಿ ನಡೆದು, ಹಲ್ಲೆ ಮಾಡಲಾಗಿದೆ.