ಕ್ರೈಂ ಅಲ್ಲಿ ಗಾಡಿ ಇಲ್ಲಿ: ಚಾಮರಾಜನಗರ ಟು ಧಾರವಾಡ

ಧಾರವಾಡ: ಕ್ರಿಮಿನಲ್ ಗಳು ತಾವು ಮಾಡಿದ ದಂಧೆಗಳನ್ನ ತಪ್ಪಿಸಿಕೊಳ್ಳಲು ಏನೇಲ್ಲ ಪ್ರಯತ್ನ ಮಾಡಿದರೂ ಕೊನೆಗೆ ಪೊಲೀಸರಿಗೆ ಸಿಗುವುದು ತಪ್ಪಿಸಿಕೊಳ್ಳಲು ಸಾಧ್ಯವೇಯಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ಘಟನೆಯೊಂದು ನಡೆದಿದೆ.
ಧಾರವಾಡದ ನುಗ್ಗಿಕೇರಿ ಹೊರವಲಯದಲ್ಲಿ ಸಿಕ್ಕಿರುವ ಬೊಲೇರೋ ವಾಹನವನ್ನ ಚಾಮರಾಜನಗರ ಪಿಎಸೈ ಹನಮಂತ ಉಪ್ಪಾರ ತಂಡ ವಶಕ್ಕೆ ಪಡೆದಿದೆ. ತಮ್ಮ ಸುಪರ್ಧೀಗೆ ಪಡೆದಿರುವ ವಾಹನವನ್ನ ಗ್ರಾಮೀಣ ಠಾಣೆ ಹೊರಾಂಗಣದಲ್ಲಿಟ್ಟಿದ್ದು, ಇನ್ನಷ್ಟು ತನಿಖೆಯನ್ನ ನಗರದ ಸುತ್ತಮುತ್ತ ನಡೆಸಲಾಗುತ್ತಿದೆ.
ಚಾಮರಾಜನಗರದ ಸುತ್ತಮುತ್ತ ನಡೆಯುತ್ತಿದ್ದ ದರೋಡೆ ಪ್ರಕರಣಗಳನ್ನ ಭೇದಿಸಿರುವ ಅಲ್ಲಿನ ಗ್ರಾಮೀಣ ಠಾಣೆಯ ಪೊಲೀಸರು, ದರೋಡೆಗೆ ಬಳಕೆ ಮಾಡುತ್ತಿದ್ದ ವಾಹನವನ್ನ ಪತ್ತೆ ಹಚ್ಚಲು ಹುಡುಕಿಕೊಂಡು ಬಂದಿದ್ದು, ನುಗ್ಗಿಕೇರಿಯ ಹನಮಂತನ ಬಳಿ.
ಇಲ್ಲಾಗಲೇ, ವಾಹನ ಸಿಕ್ಕಿದೆ. ಅದರಲ್ಲೊಂದಿಷ್ಟು ವಸ್ತುಗಳು ಕೂಡಾ ಲಭ್ಯವಾಗಿವೆ. ಅಲ್ಲಿ ದರೋಡೆ ಮಾಡಿದ ವಸ್ತುಗಳನ್ನ ಧಾರವಾಡದಲ್ಲಿ ಮಾರಾಟ ಮಾಡಿರಬಹುದೆಂಬ ಶಂಕೆಯೂ ಚಾಮರಾಜನಗರ ಪೊಲೀಸರಲ್ಲಿದ್ದು, ಆ ಬಗ್ಗೆಯೂ ನಗರದಲ್ಲಿ ಬೀಡು ಬಿಟ್ಟು ತನಿಖೆ ನಡೆಸುತ್ತಿದ್ದಾರೆ.