ಹುಬ್ಬಳ್ಳಿ ಮಂಟೂರ ರಸ್ತೆ ಬೆಟ್ಟಿಂಗ್: ಅಪ್ಪನ ಮೇಲೆ ಕೇಸ್, ಮಗನ ಬಿಡೋಕೆ “40”K- ಕೃಷ್ಣನ ಸನ್ನಿಧಿಯಲ್ಲಿ ಗೋವಿಂದಾ… ಗೋವಿಂದಾ….!!!

ಹುಬ್ಬಳ್ಳಿ: ಅವಳಿನಗರಕ್ಕೆ ಪೊಲೀಸ್ ಕಮೀಷನರ್ ಆಗಿ ದಕ್ಷ ಅಧಿಕಾರಿ ಲಾಬುರಾಮ್ ಅವರು, ಅಧಿಕಾರ ಸ್ವೀಕರಿಸಿ ವರ್ಷಗಳೇ ಕಳೆದು ಹೋದರೂ ವ್ಯವಸ್ಥೆಯನ್ನ ಸುಧಾರಿಸೋಕೆ ಆಗದೇ ಇರುವುದು ಸೋಜಿಗ ಸಂಗತಿಯಾಗಿದೆ.

ಪೊಲೀಸ್ ಠಾಣೆಗಳಲ್ಲಿ ನಿರಂತರವಾಗಿ ಕಣ್ಣಾಮುಚ್ಚಾಲೆಗಳು ನಡೆಯುತ್ತಲೇ ಇವೆ. ಹಾಗೇಯೇ ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ಬೆಟ್ಟಿಂಗ್ ಆಡುತ್ತಿದ್ದವವರ ಬಂಧನ ಮಾಡಲಾಗಿದೆ. ಆ ಸಮಯದಲ್ಲಿ ಸಿಕ್ಕ ಮೂವರ ಪೈಕಿ ಇಬ್ಬರನ್ನ ಕೇಸಿನಲ್ಲಿ ಹಾಕಿ, ಪ್ರಮುಖ ದಂಧೆಕೋರನನ್ನ 40 ಸಾವಿರ ಪಡೆದು ಮರಳಿ ಕಳಿಸಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಪೊಲೀಸರು ಠಾಣೆಯಲ್ಲಿ ಬಡಿದಾಡಿಕೊಂಡರೂ, ಕಮೀಷನರ್ ಕ್ರಮ ಜರುಗಿಸದೇ ಪಾರಾದ ಸಿಬ್ಬಂದಿಯೇ ಈ ಸೆಟ್ಲ್ ಮಾಡಿದ್ದಾನೆಂದು ಖಚಿತ ಮೂಲಗಳಿಂದ ಗೊತ್ತಾಗಿದೆ.
ತಂದೆಯನ್ನ ಕೇಸಿನಲ್ಲಿ ಆರೋಪಿ ಮಗನನ್ನ ಕೈ ಬಿಟ್ಟದ್ದಕ್ಕೆ ಹೊಂದಾಣಿಕೆ ಮಾಡಿದ್ದು ಅದೇ ಠಾಣೆಯ “ಬಡ್ಡಿ’ಬಿಸಿ” ಸಿಬ್ಬಂದಿ ಎನ್ನುವುದು ರಹಸ್ಯವಾಗಿ ಉಳಿದಿಲ್ಲ. ಪೊಲೀಸ್ ಕಮೀಷನರ್ ಅವರ ಒಳ್ಳೆಯತವನ್ನೂ ದುರುಪಯೋಗ ಮಾಡಿಕೊಳ್ಳುವ ಸಿಬ್ಬಂದಿಗಳು ಕಡಿವಾಣ ಬೀಳತ್ತೋ ಅಥವಾ ಚಲ್ತಾ ಹೈ… ಎನ್ನಲಾಗತ್ತೋ… ಕಾದು ನೋಡಬೇಕಿದೆ.