Karnataka Voice

Latest Kannada News

ಕ್ರಿಕೆಟ್ ಬೆಟ್ಟಿಂಗ್ ಹುಬ್ಬಳ್ಳಿಯಲ್ಲಿ ಐವರ ಬಂಧನ…!

Spread the love

ಹುಬ್ಬಳ್ಳಿಯ ದಾಜಿಬಾನಪೇಟೆಯಲ್ಲಿ ಬೆಟ್ಟಿಂಗ್ ಆಡುತ್ತಿದ್ದವರ ಮೇಲೆ ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು ದಾಳಿ ನಡೆಸಿ, ಮೂವರನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನ ಹಳೇಹುಬ್ಬಳ್ಳಿ ಪ್ರದೇಶದ ಸದಾಶಿವ ಹಾಲಯ್ಯ ಹುಚ್ಚೇಶ್ವರಮಠ, ನಜೀರ ಅಹ್ಮದ ಖಾಸೀಮಸಾಬ ನದಾಫ ಹಾಗೂ ನೂರ ಅಹ್ಮದ ಮೀರಾಸಾಬ ದೋಖಾವಾಲೆ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ 15090 ರೂಪಾಯಿ ನಗದು ಹಣ, ಪೆನ್ನು ಹಾಗೂ ನೋಟ್ ಪುಸ್ತಕವನ್ನ ವಶಕ್ಕೆ ಪಡೆಯಲಾಗಿದೆ. ಉಪನಗರ ಠಾಣೆಯ ಇನ್ಸಪೆಕ್ಟರ್ ರವಿಚಂದ್ರ ಡಿ.ಬಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳೊಂದಿಗೆ ದಾಳಿ ಮಾಡಲಾಗಿತ್ತು.

ಹುಬ್ಬಳ್ಳಿಯ ಗೋಕುಲ ರಸ್ತೆಯ ಯಾತ್ರಿ ಬಾರ್ ಹತ್ತಿರ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದವರ ಮೇಲೆ ದಾಳಿ ಮಾಡಿದ ಹುಬ್ಬಳ್ಳಿ-ಧಾರವಾಡ ಕಮೀಷನರೇಟಿನ ಸಿಸಿಬಿ ಪೊಲೀಸರು ಇಬ್ಬರನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನ ಮಹೇಂದ್ರ ಮಹಾದೇವ ಜಿತೂರಿ ಮತ್ತು ರಾಜೇಂದ್ರ ಸುರೇಶ ಗುಡಿ ಎಂದು ಗುರುತಿಸಲಾಗಿದ್ದು, ಬಂಧಿತರಿಂದ 7540 ರೂಪಾಯಿ ನಗದು ಹಣ, ಬೆಟ್ಟಿಂಗಗೆ ಬಳಕೆ ಮಾಡುತ್ತಿದ್ದ ಪೆನ್ನು ಮತ್ತು ಪುಸ್ತಕವನ್ನ ವಶಕ್ಕೆ ಪಡೆಯಲಾಗಿದೆ.

ಸಿಸಿಬಿ ಮಾಡಿದ ದಾಳಿಯಲ್ಲಿ ಸಿಕ್ಕಿರುವ ಆರೋಪಿಗಳ ವಿರುದ್ಧ ಗೋಕುಲ ರೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *